ಹುಬ್ಬಳ್ಳಿಯಿಂದ ಕೋಟ್ಟಯಂಗೆ ವಿಶೇಷ ರೈಲು
ಶಬರಿಮಲೆ: ಮಂಡಲ, ಮಕರಜ್ಯೋತಿ ಉತ್ಸವಕ್ಕೆ ಕರ್ನಾಟಕದ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಗೆ ಸಂದ ರ್ಶಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಿಂದ ಕೋಟ್ಟಯಂಗೆ ವಿಶೇಷ ರೈಲು ಸಂಚಾರ ನಡೆಸಲು ದಕ್ಷಿಣ ಹಾಗೂ ಪಶ್ಚಿಮ ರೈಲ್ವೇ ನಿರ್ಧರಿಸಿದೆ.
ಇದರಂತೆ ೦೭೩೦೫ ನಂಬ್ರದ ಹುಬ್ಬಳ್ಳಿ-ಕೋಟ್ಟಯಂ ಪ್ರತಿವಾರ ಎಕ್ಸ್ಪ್ರೆಸ್ ಡಿ.೧ರಿಂದ ಜನವರಿ ೨೦ರ ವರೆಗೆ ಸಂಚಾರ ನಡೆಸಲಿದೆ. ಪ್ರತೀ ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ಹೊರಡುವ ರೈಲು ಮರುದಿನ ಬೆಳಿಗ್ಗೆ ೮.೧೫ಕ್ಕೆ ಕೋಟ್ಟಯಂಗೆ ತಲುಪಲಿದೆ.೦೭೩೦೬ ನಂಬ್ರದ ಪ್ರತಿವಾರ ಎಕ್ಸ್ಪ್ರೆಸ್ ರೈಲು ಡಿಸೆಂಬರ್ ೩ರಿಂದ ಜನವರಿ ೨೧ರ ವರೆಗೆ ಸಂಚಾರ ನಡೆಸಲಿದೆ. ಪ್ರತೀ ಆದಿತ್ಯವಾರ ಬೆಳಿಗ್ಗೆ ೧೧ಕ್ಕೆ ಕೋಟ್ಟಯಂ, ಕೋಟ್ಟಯಂನಿಂದ ಮರಳಿ ಸಂಚಾರ ನಡೆಸುವ ಈ ರೈಲು ಸೋಮವಾರ ಬೆಳಿಗ್ಗೆ ೯.೫೦ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಅದೇ ರೀತಿ ೦೭೩೦೭ ನಂಬ್ರದ ಕೋಟ್ಟಯಂ-ಹುಬ್ಬಳ್ಳಿ ಪ್ರತಿವಾರ ಎಕ್ಸ್ಪ್ರೆಸ್ ಡಿ. ೫ರಿಂದ ಜನವರಿ ೧೬ರ ವರೆಗೆ ಸಂಚಾರ ನಡೆಸುವುದು. ಪ್ರತೀ ಮಂಗಳವಾರ ಈ ರೈಲು ಸಂಚಾರ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ೧೧ಕ್ಕೆ ಹುಬ್ಬಳ್ಳಿಯಿಂದ ಹೊರಡುವ ರೈಲು ಬುಧವಾರ ಬೆಳಿಗ್ಗೆ ೮.೧೫ಕ್ಕೆ ಕೋಟ್ಟಯಂಗೆ ತಲುಪಲಿದೆ. ೦೭೩೦೮ ನಂಬ್ರದ ರೈಲು ಡಿಸೆಂಬರ್ ೬ರಿಂದ ೧೭ರ ವರೆಗೆ ಸಂಚಾರ ನಡೆಸುವುದು.