ಹೆಚ್ಚುತ್ತಿರುವ ಉಷ್ಣತೆ: ಕಾಸರಗೋಡು ಸೇರಿದಂತೆ ೧೨ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಕಾಸರಗೋಡು: ರಾಜ್ಯದ ಇತಿ ಹಾಸದಲ್ಲಿ ಇದೇ ಪ್ರಥಮ ವೆಂಬಂತೆ ಒಟ್ಟು ೧೪ ಜಿಲ್ಲೆಗಳ ಪೈಕಿ ಕಾಸರ ಗೋಡು ಸೇರಿದಂತೆ ೧೨ ಜಿಲ್ಲೆಗಳಲ್ಲಿ ಕೇಂದ್ರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇಡುಕ್ಕಿ ಮತ್ತು ವಯನಾಡು ಜಿಲ್ಲೆಗಳನ್ನು ಹೊರತುಪಡಿಸಿ ಇತರ ಎಲ್ಲಾ ಜಿಲ್ಲೆಗಳ ತಾಪಮಾನ ಮಟ್ಟ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು, ಎರ್ನಾಕುಳಂ, ಪತ್ತನಂತಿಟ್ಟ ಮತ್ತು ತಿರುವನಂತಪುರ ಜಿಲ್ಲೆಗ ಉಷ್ಣತಾ ಮಟ್ಟ ಈಗ ೩೭ ಡಿಗ್ರಿಗೇರಿದೆ. ಕೊಲ್ಲಂ, ಕೋಟ್ಟಯಂ ಮತ್ತು ಆಲ ಪ್ಪುಳ ಜಿಲ್ಲೆಗಳಲ್ಲಿ ೩೮ ಡಿಗ್ರಿ ಹಾಗೂ ತೃಶೂರು, ಪಾಲ್ಘಾಟ್, ಮಲಪ್ಪುರಂ ಮತ್ತು ಕಲ್ಲಿಕೋಟೆ ಜಿಲ್ಲೆಗಳಲ್ಲಿ ಈ ಮಟ್ಟ ೩೬ ಡಿಗ್ರಿಗೇರಿದೆ.
ಸಾಧಾರಣ ಉಷ್ಣತಾ ಮಟ್ಟಕ್ಕಿಂತ ೨ರಿಂದ ೪ ಡಿಗ್ರಿಗೇರಿರುವುದು ರಾಜ್ಯದ ಕಳೆದ ೫೦ ವರ್ಷಗಳ ಇತಿಹಾಸದಲ್ಲೇ ಇದು ಪ್ರಥಮವಾಗಿದೆ. ಅದರ ಆಧಾರದಲ್ಲಿ ೧೨ ಜಿಲ್ಲೆಗಳಲ್ಲಿ ಒಂದೇ ಬಾರಿ ಅಲರ್ಟ್ ಘೋಷಿಸಿರುವುದು ರಾಜ್ಯದ ಚರಿತ್ರೆಯಲ್ಲಿ ಇದು ಪ್ರಥಮವಾಗಿದೆ. ಉಷ್ಣತಾ ಮಟ್ಟದಲ್ಲಿ ಉಂಟಾಗುತ್ತಿರುವ ಇಂತಹ ಏರಿಕೆ ರಾಜ್ಯದಲ್ಲಿ ನೀರಿನ ಮೇಲೆ ತೀವ್ರ ಪರಿಣಾಮ ಬೀರುವ ಆತಂಕವನ್ನು ಉಂಟುಮಾಡಿದೆ.