ಹೆಣ್ಮಕ್ಕಳಿಗೆ ಫೋನ್‌ನಲ್ಲಿ ಇಷ್ಟು ಮಾತನಾಡಲು ಏನಿದೆ ಕಾರ್ಯ?: ವಿವಾದವಾಗುತ್ತಿರುವ ಸಲೀಂ ಕುಮಾರ್ ಹೇಳಿಕೆ
ಕಲ್ಲಿಕೋಟೆ: ಹೆಣ್ಮಕ್ಕಳೆಲ್ಲ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವಷ್ಟು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕೂಡಾ ಫೋನ್ ಕಾಲ್‌ಗಳು ಬಾರದೆಂದು ನಟ ಸಲೀಂ ಕುಮಾರ್ ನೀಡಿದ ಹೇಳಿಕೆ ವಿವಾದವಾಗುತ್ತಿದೆ. ಕಲ್ಲಿಕೋಟೆಯಲ್ಲಿ ನೂತನ ಡಿಸಿಸಿ ಕಚೇರಿಯ ಉದ್ಘಾಟನೆ ಸಂಬಂಧಿಸಿ ಆಯೋಜಿಸಿದ ತ್ರಿವರ್ಣೋತ್ಸವ ಕಾರ್ಯಕ್ರಮದಲ್ಲಿ ಈ ವಿವಾದ ಹೇಳಿಕೆ ಸಲೀಂ ಕುಮಾರ್ ನೀಡಿದ್ದಾರೆ. ಪರವೂರ್‌ನಿಂದ ಆರಂಭಿಸಿ ಕಲ್ಲಿಕೋಟೆ ವರೆಗೆ ಸಂಚರಿಸಿದಾಗ ನಾನು ನೋಡಿದ್ದು ಹೆಣ್ಮಕ್ಕಳೆಲ್ಲಾ ರಸ್ತೆಯಲ್ಲಿ ಫೋನ್ ಕರೆ ಮಾಡಿ ಮಾತನಾಡುತ್ತಾ ನಡೆಯುತ್ತಿರು ವುದನ್ನಾಗಿದೆ. ಇವರೆಲ್ಲಾ ವಿದ್ಯಾರ್ಥಿಗಳಾಗಿದ್ದಾರೆ.
ಇವರು ಯಾವುದನ್ನೂ ಕೂಡಾ ಗಮನಿಸುವುದಿಲ್ಲ. ಇವರಿಗೆ ಇಷ್ಟು ಮಾತನಾಡಲು ಏನಿದೆ? ಯಾರಲ್ಲಿ ಇವರು ಮಾತನಾಡುತ್ತಿರುವುದು? ಇವರಿಗೆಲ್ಲ ನಮ್ಮ ಕೇರಳದ ಸಂಸ್ಕೃತಿಯನ್ನು ಕಲಿಸಬೇಕೆಂದು ಸಲೀಂ ಕುಮಾರ್ ನುಡಿದರು. ಇನ್ನೊಬ್ಬರೊಂದಿಗೆ ಯಾವುದೇ ಸಂಪರ್ಕವಿಲ್ಲದ ಕಾರವಾಗಿದೆ ಇದು. ಈ ಹಿಂದೆ ಚಹಾದಂಗಡಿಯಲ್ಲಿ, ಗ್ರಂಥಾಲಯದಲ್ಲಿ, ವಿವಾಹ ಸಂದರ್ಭದಲ್ಲಿ, ಮರಣ ನಡೆದ ಮನೆಗಳಲ್ಲೆಲ್ಲಾ ಮನುಷ್ಯರು ಪರಸ್ಪರ ನೋಡಿ ಮಾತನಾಡುತ್ತಿದ್ದರು. ಆದರೆ ಇಂದು ಯಾರಿಗೂ ಇದಕ್ಕೆ ಸಮಯವಿಲ್ಲದಾಗಿದೆ. ನನ್ನ ಫೋನ್ ನನ್ನ ಬದುಕು ಎಂದು ಜೀವಿಸುವವರೇ ಈಗ ಹೆಚ್ಚಿನ ಮಂದಿ ಎಂದು ಸಲೀಂ ಕುಮಾರ್ ನುಡಿದರು.