ಹೆಣ್ಮಕ್ಕಳ ಮುಂದೆ ನಗ್ನತಾ ಪ್ರದರ್ಶನ:ಆರೋಪಿ ಸೆರೆ
ಕುಂಬಳೆ: ಹೆಣ್ಮಕ್ಕಳ ಮುಂದೆ ನಗ್ನತಾ ಪ್ರದರ್ಶನ ನಡೆಸಿದ ಆರೋಪದಂತೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ಭಾಸ್ಕರನಗರ ನಿವಾಸಿ ಫ್ಲೋಯಿಡ್ ರುಬಿನ್ ಡಿಸೋಜಾ (೨೦) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಈತ ನಾಲ್ಕು ದಿನಗಳ ಹಿಂದೆ ಶಾಲೆ ಬಿಟ್ಟು ಮನೆಗೆ ನಡೆದು ಹೋಗುತ್ತಿದ್ದ ಹೆಣ್ಮಕ್ಕಳ ಮುಂದೆ ನಗ್ನತಾ ಪ್ರದರ್ಶನ ನಡೆಸಿದ್ದಾನೆಂದು ದೂರಲಾಗಿದೆ. ಮಕ್ಕಳು ಈ ವಿಷಯವನ್ನು ಮನೆಯವರಲ್ಲಿ ತಿಳಿಸಿದ್ದಾರೆ. ಮನೆಯವರು ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ಸಿಸಿ ಕ್ಯಾಮರಾ ಗಳನ್ನು ಪರಿಶೀಲಿಸಿದಾಗ ಆರೋ ಪಿಯ ಗುರುತು ಪತ್ತೆಹಚ್ಚಲಾಗಿದೆ.
ಘಟನೆಗೆ ಸಂಬಂಧಿಸಿ ಆರೋ ಪಿ ವಿರುದ್ಧ ಪೋಕ್ಸೋ ಕೇಸು ದಾಖಲಿಸಲಾಗಿದೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಆರೋಪಿ ಯನ್ನು ಎಸ್ಐಗಳಾದ ವಿ.ಕೆ. ಅನೀಶ್, ರಜಿತ್ ಎಂಬಿವರು ಬಂಧಿಸಿದ್ದಾರೆ.