ಹೆರಿಗೆ ಬಳಿಕ ತಾಯಿ, ನವಜಾತ ಶಿಶು ಸಾವು
ಕಾಸರಗೋಡು: ಹೆರಿಗೆ ಬಳಿಕ ತಾಯಿ ಮತ್ತು ನವಜಾತ ಶಿಶು ಸಾವನ್ನಪ್ಪಿದ ಘಟನೆ ನಡೆದಿದೆ. ಬೇಕಲ ಚೇಟುಕುಂಡು ಕೀಕಾನ ಕಾವಡಿ ನಿವಾಸದ ಗಲ್ಫ್ ಉದ್ಯೋಗಿ ಕೆ. ಸಾಗರ್ ಎಂಬವರ ಪತ್ನಿ ದೀಪ (36) ಮತ್ತು ನವಜಾತ ಶಿಶು ಸಾವನ್ನಪ್ಪಿದೆ.
ಹೆರಿಗೆಗಾಗಿ ದೀಪಾರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಸೋಮವಾರ ದಾಖಲಿಸಲಾಗಿತ್ತು. ಸಂಜೆ ಅವರಿಗೆ ಹೆರಿಗೆಯಾಗಿದೆ. ತಕ್ಷಣ ನವಜಾತ ಶಿಶು ಸಾವನ್ನಪ್ಪಿದ್ದು, ಬಳಿಕ ದೀಪರಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಇದರಿಂದ ಅವರನ್ನು ತಕ್ಷಣ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬೇಕಲ ಪೊಲೀಸರು ಈ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ನೀಲೇಶ್ವರ ಪಡಿಞ್ಞಾಟಂ ಕೊಳುವಯಲ್ ನಾಗಚ್ಚೇರಿಯ ಬಾಲಕೃಷ್ಣನ್-ರಾಜೀವನಿ ದಂಪತಿಯ ಪುತ್ರಿಯಾದ ದೀಪ ಪತಿ, ಪುತ್ರಿ ಸಾಯಾ ಸಾಗರ್, ಸಹೋದರಿ ಸಂಧ್ಯಾ ಹಾಗೂ ಅಪಾರ ಬಂದು-ಮಿತ್ರರನ್ನು ಅಗಲಿದ್ದಾರೆ.