ಹೆರಿಗೆ ವೇಳೆ ನೀಡಿದ ಚಿನ್ನಾಭರಣ ಹಿಂತಿರುಗಿಸಿಲ್ಲ, ಆರೋಪ ನಿಷೇಧಿಸಿದ ಸಂಬಂಧಿಕೆ

ಕಾಸರಗೋಡು: ಹೆರಿಗೆಗಾಗಿ  ಲೇಬರ್ ರೂಂಗೆ ತೆರಳಿದ್ದ ಗರ್ಭಿಣಿ ನೀಡಿದ ಚಿನ್ನಾಭರಣಗಳನ್ನು ಹಿಂತಿರುಗಿ ನೀಡಿಲ್ಲ ಎಂದು ದೂರಲಾಗಿದೆ. ಮಾತುಕತೆ ಮೂಲಕ ಸಂಧಾನಯತ್ನ ವಿಫಲಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದರು.

ಪೆರ್ಮುದೆಯ ಅನ್ಸಾರ್‌ನ ಪತ್ನಿ ಫಾತಿಮ್ಮತ್ ಹಸ್ನ (22)ರ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೇ ೨೪ರಂದು ಫಾತಿಮ್ಮತ್ ಹಸ್ನರಿಗೆ ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ  ಹೆರಿಗೆ ನಡೆದಿತ್ತು. ಇದಕ್ಕೂ ಮೊದಲು ಲೇಬರ್ ಕೊಠಡಿಗೆ ತೆರಳುವ ಮುಂಚಿತ ಕಿವಿಯ ಓಲೆ, ಕೈಯ ಸರವನ್ನು,  ಕಾಲ್ಗೆಜ್ಜೆಯನ್ನು ತೆಗೆದು ಸಂಬಂಧಿಕಳಾದ ಮಹಿಳಯಲ್ಲಿ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಆಭರಣಗಳನ್ನು ಆಗ್ರಹಿಸಿದಾಗ ನೀಡಿಲ್ಲವೆನ್ನಲಾಗಿದೆ. ಈ ವಿಷಯ ಮಾತುಕತೆ ಮೂಲಕ ಪರಿಹರಿಸಲು ಯತ್ನಿಸಿದರೂ ಫಲ ಉಂಟಾಗಿಲ್ಲ. ಈ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ. ತನಿಖೆಯಲ್ಲಿ  ಸಿಸಿ ಟಿವಿಯಿಂದ ಮಹಿಳೆ ಚಿನ್ನಾಭರಣ ನೀಡುವ ದೃಶ್ಯ ಪತ್ತೆಯಾಗಿದೆ. ತನಿಖೆ ಮುಂದುವರಿಯುತ್ತಿದೆ.

RELATED NEWS

You cannot copy contents of this page