ಹೇಮ ಕಮಿಟಿ ವರದಿ: ಹೇಳಿಕೆ ನೀಡಲು ಹಿಂಜರಿತ; ಕೇಸು ಹಿಂತೆಗೆತ ಸಾಧ್ಯತೆ
ತಿರುವನಂತಪುರ: ಹೇಮ ಕಮಿಟಿ ವರದಿಯ ಆಧಾರದಲ್ಲಿ ದಾಖಲಿಸಿ ಕೊಂಡ ಪ್ರಕರಣಗಳನ್ನು ಹಿಂತೆಗೆದು ಕೊಳ್ಳುವ ಬಗ್ಗೆ ಪರಿಗಣನೆಯಲ್ಲಿ ದೆಯೆಂದು ಹೇಳಲಾಗುತ್ತಿದೆ.
ಕಮಿಟಿ ಮುಂದೆ ಹೇಳಿಕೆ ನೀಡಿದವರು ಪೊಲೀಸರ ಮುಂದೆ ಹೇಳಿಕೆ ನೀಡಲು ನಿರಾಕರಿಸುತ್ತಿರು ವುದೇ ಇದಕ್ಕೆ ಕಾರಣವೆನ್ನಲಾಗಿದೆ. ಆರು ವರ್ಷಗಳ ಹಿಂದೆ ಹೇಮ ಕಮಿಟಿ ಮುಂದೆ ಹೇಳಿಕೆ ನೀಡಲಾ ಗಿತ್ತು. ಆದರೆ ಇದೀಗ ಅಂದಿನ ಪರಿಸ್ಥಿತಿಯಿಲ್ಲವೆಂದು ಕೆಲವರು ಹೇಳುತ್ತಿದ್ದಾರೆ. ದೂರುಗಾರರು ಸಹಕರಿಸದಿರುವುದರಿಂದ ತನಿಖೆ ನಡೆಸಲು ಸಾಧ್ಯವಿಲ್ಲವೆಂದು ಪ್ರತ್ಯೇಕ ತನಿಖಾ ತಂಡ ಅಭಿಪ್ರಾಯಪಡುತ್ತಿದೆ ಯೆನ್ನಲಾಗಿದೆ. ಪ್ರಸ್ತುತ ೮೦ ಕೇಸುಗಳನ್ನು ದಾಖಲಿಸಲಾಗಿದೆ. ಇಧರಲ್ಲಿ 35 ಕೇಸುಗಳು ಹೇಮ ಕಮಿಟಿ ವರದಿಯ ಆಧಾರದಲ್ಲಾಗಿದೆ. ವರದಿ ಬಹಿರಂಗಗೊಂಡ ಬೆನ್ನಲ್ಲೇ ತನಿಖಾ ತಂಡಕ್ಕೆ ನೇರವಾಗಿ ಲಭಿಸಿದ ದೂರುಗಳಲ್ಲಿ ಇತರ ಕೇಸುಗಳನ್ನು ದಾಖಲಿಸಲಾಗಿತ್ತು. ಆದ್ದರಿಂದ ನೇರವಾಗಿ ಲಭಿಸಿದ ಕೇಸುಗಳಲ್ಲಿ ಆರೋಪಪಟ್ಟಿ ತಯಾರಿಸಿ ಮುಂದೆ ಸಾಗಲು ತನಿಖಾ ತಂಡ ಆಲೋಚಿಸಿದೆ.
ಕೊಚ್ಚಿಯಲ್ಲಿ ನಟಿ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಸಿನಿಮಾ ರಂಗದಲ್ಲಿ ಮಹಿಳಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧ್ಯಯನ ನಡೆಸಲು ರಾಜ್ಯ ಸರಕಾರ ಜಸ್ಟೀಸ್ ಹೇಮ ಕಮಿಟಿಯನ್ನು ನೇಮಿಸಿತ್ತು. ಹೇಮ ಕಮಿಟಿ ೨೦೧೯ ಡಿಸೆಂಬರ್ ೩೧ ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಿಗೆ ನೇರವಾಗಿ ವರದಿ ಸಲ್ಲಿಸಿತ್ತು.