ಹೈಸ್ಕೂಲ್ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆ
ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ಕಾಸರಗೋಡು ರೋಟರಿ ಹಾಗೂ ಜಿಲ್ಲಾ ಮಾಹಿತಿ ಕೇಂದ್ರ ಜಂಟಿಯಾಗಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ, ರಾಷ್ಟ್ರೀಯ ಗೀತೆ ಸ್ಪರ್ಧೆ ನಡೆಸುತ್ತದೆ. ಈ ತಿಂಗಳ 13ರಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಕಾಸರಗೋಡು ರೋಟರಿ ಭವನದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸ್ಪರ್ಧೆಗೆ ಎಂಟ್ರಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಈ ತಿಂಗಳ 9 ಆಗಿದ್ದು, ಒಂದು ತಂಡದಲ್ಲಿ 7 ಮಂದಿ ಭಾಗವಹಿಸಬಹುದು. ಪ್ರತೀ ತಂಡಕ್ಕೆ 2 ಸ್ಪರ್ಧೆಗಳಲ್ಲೂ ಭಾಗವ ಹಿಸಲು ಅವಕಾಶವಿದೆ. ಸಂಗೀತ ಉಪಕರಣಗಳನ್ನು ಉಪಯೋಗಿಸಿ, ಇಲ್ಲದೆಯೂ ಸ್ಪರ್ಧೆಯಲ್ಲಿ ಭಾಗವಹಿಸಬಹು ದಾಗಿದೆ. 5000, 3000, 2000 ಎಂಬೀ ಕ್ರಮದಲ್ಲಿ ಅನುಕ್ರಮವಾಗಿ 1ರಿಂದ 3ರವರೆಗಿನ ಸ್ಥಾನದವರಿಗೆ ನಗದು ಬಹುಮಾನ ನೀಡಲಾಗುವುದು.