ಹೊಸಂಗಡಿ ಸರ್ವೀಸ್ ರಸ್ತೆಯಲ್ಲಿ ನೀರು ಕಟ್ಟಿನಿಂತು ಸಂಚಾರ ಸಮಸ್ಯೆ
ಮಂಜೇಶ್ವರ: ಹೊಸಂಗಡಿ ಪೇಟೆಯ ಸರ್ವೀಸ್ ರಸ್ತೆಯಲ್ಲಿ ಮಳೆ ನೀರು ಕಟ್ಟಿನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದಾಗಿ ದೂರಲಾಗಿದೆ. ಇಲ್ಲಿದ್ದ ಚರಂಡಿಗೆ ವ್ಯಾಪಾರ ಸಂಸ್ಥೆಯ ಕಟ್ಟಡದಿಂದ ಮಲಿನ ಜಲವನ್ನು ಹರಿಯಬಿಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪಂಚಾಯತ್ ನೇತೃತ್ವದಲ್ಲಿ ಇತ್ತೀಚೆಗೆ ಪರಿಶೀಲಿಸಿದಾಗ ಚರಂಡಿಗೆ ಮಲಿನ ನೀರು ಹರಿಯುತ್ತಿರುವುದು ದೃಢಗೊಂಡಿದ್ದು, ಈ ಹಿನ್ನೆಲೆಯಲ್ಲಿ ಚರಂಡಿಯನ್ನು ಮುಚ್ಚಲಾಗಿದೆ. ಇದರಿಂದಾಗಿ ಈಗ ಇಲ್ಲಿ ಮಳೆನೀರು ರಸ್ತೆಯಲ್ಲೇ ಕಟ್ಟಿ ನಿಲ್ಲುತ್ತಿದೆ. ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಹೊಸ ಚರಂಡಿ ನಿರ್ಮಾಣ ಇನ್ನಷ್ಟೇ ನಡೆಯಬೇಕಾ ಗಿದ್ದು, ಈಗ ನೀರು ರಸ್ತೆಯಲ್ಲಿ ಹರಿಯುತ್ತಿ ರುವುದಾಗಿ ಸ್ಥಳೀಯರು ದೂರಿದ್ದಾರೆ. ಶೀಘ್ರವೇ ಚರಂಡಿ ನಿರ್ಮಿಸಿ ಸಂಚಾರ ಸುಗಮಗೊಳಿಸಬೇಕೆಂದು ಆಗ್ರಹಿಸಲಾಗಿದೆ