೧೦ ಲಕ್ಷ ರೂ. ಮೌಲ್ಯದ ಸಿಗರೇಟ್ ಉತ್ಪನ್ನಗಳು ಪತ್ತೆ ಕಾಸರಗೋಡು ನಿವಾಸಿ ಕಸ್ಟಡಿಗೆ

ಮಂಜೇಶ್ವರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ದುಬಾಯಿಯಿಂದ ಸಾಗಿಸಲಾಗಿದ್ದ ೯,೯೨,೨೪೦ ರೂ. ಮೌಲ್ಯದ ಸಿಗರೇಟ್ ಉತ್ಪನ್ನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಧಿಸಿ  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ  ಕಾಸರ ಗೋಡು ನಿವಾಸಿಯೋರ್ವನನ್ನು ಕಸ್ಟಮ್ಸ್ ತಂಡ ಕಸ್ಟಡಿಗೆ ತೆಗೆದುಕೊಂಡಿದೆ. ವಶಪಡಿಸಲಾದ ಮಾಲಿನಲ್ಲಿ ೨೪೦ ಪ್ಯಾಕೆಟ್ ಅಮೆರಿಕನ್ ನ್ಯಾಚುರಲ್ ಸಿಗರೇಟ್‌ಗಳು ೨೦ ಪ್ಯಾಕೆಟ್ ಕಾಲಿ ಬನ್ ಫೋಡ್, ೨೦ ಪ್ಯಾಕೆಟ್ ಕಾಲಿಬನ್-೩ ರಿಫಿಲ್ಲೆಬಲ್ ಪೋಡ್, ೧೨೦ ಪ್ಯಾಕೆಟ್ ಕಾಲಿಬನ್- ಎ-೨ ಸೈಸ್ ರೀಫಿಲ್ಲಿಂಗ್ ಫೋಡ್ ಎಂಬಿವುಗಳನ್ನು ಒಳಗೊಂಡಿದ್ದವು. ಈ ಎಲ್ಲಾ ಮಾಲುಗಳು ಇ-ಸಿಗರೇಟ್‌ನ ವಿವಿಧ ಘಟಕಗಳಾಗಿವೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕಸ್ಟಡಿಗೊಳಗಾದ ಕಾಸರಗೋಡು ನಿವಾಸಿಯನ್ನು ಕಸ್ಟಮ್ಸ್ ತಂಡ ತೀವ್ರ ವಿಚಾರಣೆಗೊಳಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page