೧೦.೧೪ ಗ್ರಾಂ ಎಂಡಿಎಂಎ ವಶ: ಓರ್ವ ಸೆರೆ
ಕುಂಬಳೆ: ಬಂಬ್ರಾಣದ ಬಳಿ ಕಾಸರಗೋಡು ಎಕ್ಸೈಸ್ ಎನ್ಪೋರ್ಸ್ಮೆಂಟ್ ಆಂಡ್ ಆಂಟಿ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್ನ ಸರ್ಕಲ್ ಇನ್ಸ್ಪೆಕ್ಟರ್ ಶಂಕರ್ ಜೆ.ಎ.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಾರೊಂದರಲ್ಲಿ ಸಾಗಿಸುತ್ತಿದ್ದ ೧೦.೧೪ ಗ್ರಾಂ ಎಂಡಿಎಂಎ ಮಾದಕ ದ್ರವ್ಯ ಪತ್ತೆಹಚ್ಚಿ ವಶಪಡಿಸಿದೆ.
ಈ ಸಂಬಂಧ ಬಾಯಿಕಟ್ಟೆಯ ಬತ್ತೇರಿ ನಿವಾಸಿ ಮೊಹಮ್ಮದ್ ಮುಸ್ತಫಾ ಯು.ಎಂ. (೩೩) ಎಂಬಾತನನ್ನು ಬಂಧಿಸಿ, ಕಾರನ್ನು ವಶಪಡಿಸಲಾಗಿದೆ. ಆತನ ವಿರುದ್ಧ ಎನ್ಡಿಪಿಎಸ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಅಬಕಾರಿ ಪ್ರಿವೆಂಟಿವ್ ಫೀಸರ್ಗಳಾದ ಮುರಳಿ ಕೆ.ವಿ, ಅಶ್ರಫ್ ಸಿ.ಕೆ, ಸಿವಿಲ್ ಎಕ್ಸೈಸ್ ಆಫೀಸರ್ಗ ಳಾದ ಪ್ರಜಿತ್ ಪಿ.ಆರ್, ನಾಸರುದ್ದೀನ್ ಎ.ಕೆ, ಶಿಲ್ಜಿತ್ ವಿ.ವಿ, ಪ್ರಿಷಿ ಪಿ.ಎಸ್, ಬಾಬು ವಿತ್ತಲ್, ಚಾಲಕ ಕ್ರಿಸ್ಟಿನ್ ಪಿ.ಎ. ಎಂಬವರು ಒಳಗೊಂಡಿದ್ದರು.