೧೭ ವರ್ಷದಾಕೆಗೆ ಗರ್ಭದಾನ: ಆಟೋ ಚಾಲಕನ ವಿರುದ್ಧ ಪೋಕ್ಸೋ ಕೇಸು

ಕುಂಬಳೆ: ೧೭ ವರ್ಷ ದಾಕೆಯನ್ನು ಗರ್ಭಿಣಿಯಾಗಿಸಿದ ದೂರಿನಂತೆ ಆಟೋ ರಿಕ್ಷಾ ಚಾಲಕನ ವಿರುದ್ಧ ಕುಂಬಳೆ ಪೊಲೀಸರು ಪೋಕ್ಸೋ ಕಾನೂನುಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ೧೭ ವರ್ಷದಾಕೆ ನೀಡಿದ ದೂರಿನಂತೆ ಆಟೋ ಚಾಲಕನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಗರ್ಭಿಣಿಯಾದ ವಿಷಯವನ್ನು ಆಕೆ ಮೊದಲು  ಯಾರಲ್ಲೂ ತಿಳಿಸಿರಲಿಲ್ಲವೆಂದೂ ಬಳಿಕ ಆಕೆ ಆರು ತಿಂಗಳ ಗರ್ಭಿಣಿಯಾದ ಬಳಿಕವಷ್ಟೇ  ಮನೆಯವರ ಗಮನಕ್ಕೆ ಬಂದಿತ್ತು. ಆ ಬಳಿಕವಷ್ಟೇ ಆಕೆ ಆ ಬಗ್ಗೆ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page