೧೮ರ ಯುವತಿ ನಾಪತ್ತೆ
ಮಂಜೇಶ್ವರ: ಮುಳಿಂಜ ಗ್ರಾಮದ ೧೮ರ ಹರೆಯದ ಯುವತಿ ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಮಂಜೇಶ್ವರ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈತಿಂಗಳ ೬ರಂದು ರಾತ್ರಿ ತನ್ನ ಮಗಳು ನೆರೆಮನೆಗೆ ಹೋಗುವುದಾಗಿ ತಿಳಿಸಿ ಹೊರಹೋದವಳು ಮತ್ತೆ ಹಿಂತಿರುಗದೆ ನಾಪತ್ತೆಯಾಗಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಾಯಿ ತಿಳಿಸಿದ್ದಾರೆ.