೨೦೧೧ರ ಬಳಿಕ ಜನಿಸಿದವರನ್ನು ಎಂಡೋಸಲ್ಫಾನ್ ಸಂತ್ರಸ್ತ ಯಾದಿಯಲ್ಲಿ ಒಳಪಡಿಸಲಾಗುವುದಿಲ್ಲ-ಆರೋಗ್ಯ ಇಲಾಖೆ

ಕಾಸರಗೋಡು: ಎಂಡೋಸ ಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ೨೦೧೧ರ ಬಳಿಕ ಜನಿಸಿದವರನ್ನು  ಒಳಪಡಿಸಲಾಗುವುದಿಲ್ಲವೆಂದು ಸ್ಪಷ್ಟಪಡಿಸಿ ರಾಜ್ಯ ಆರೋಗ್ಯ ಇಲಾಖೆ ಹೊಸ  ಆದೇಶ ಹೊರಡಿಸಿದೆ.

ಎಂಡೋಸಲ್ಫಾನ್  ಸೃಷ್ಟಿಸುವ ದುಷ್ಪರಿಣಾಮ ಮುಂದಿನ ಆರು ವರ್ಷಗಳ ತನಕ ಮಾತ್ರವೇ ಉಳಿದುಕೊಳ್ಳಲಿದೆ. ನಂತರ ಅದೂ ಇಲ್ಲದಾಗಲಿದೆಯೆಂದು  ತಜ್ಞರ ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ೨೦೨೧ರ ಬಳಿಕ  ಜನಿಸಿದವರನ್ನು ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಒಳಪಡಿಸದೇ ಇರುವ ತೀರ್ಮಾನ ಕೈಗೊಳ್ಳಲಾಗಿದೆ ಯೆಂದು  ಆರೋಗ್ಯ ಇಲಾಖೆ ಹೊರಡಿಸಿದ ಆದೇಶದಲ್ಲಿ ಕಾರಣ ನೀಡಲಾಗಿದೆ.

ಕೇರಳದಲ್ಲಿ ಎಂಡೋಸಲ್ಫಾನ್ ಬಳಕೆ ಮೇಲೆ ೨೦೦೫ ಅಕ್ಟೋಬರ್ ೨೫ರಂದು ನಿಷೇದ ಹೇರಲಾಗಿದೆ. ಎಂಡೋಸಲ್ಫಾನ್ ದುಷ್ಪರಿಣಾಮ ಆರು ವರ್ಷಗಳ ಬಳಿಕ ಉಂಟಾಗದು ಎಂಬ ತಜ್ಞರ ಸಮಿತಿಯ ವರದಿಯ ಆಧಾರದಲ್ಲಿ ೨೦೧೧ರ ಬಳಿಕ ಎಂಡೋಸಲ್ಫಾನ್ ಸಂತ್ರಸ್ತರ ಯಾದಿ ಯಲ್ಲಿ ಹೊಸಬರ  ಹೆಸರು ಒಳಪಡಿ ಸದೇ ಇರುವ ಹೊಸ ತೀರ್ಮಾನಕ್ಕೆ ಬರಲಾಗಿ ದೆಯೆಂದು ಆರೋಗ್ಯ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಎಂಡೋಸಲ್ಫಾನ್ ಸಂತ್ರಸ್ತರ ಯಾದಿಯಲ್ಲಿ ಈಗ ಒಟ್ಟು ೬೭೨೮ ಮಂದಿಯ ಹೆಸರು ಒಳಗೊಂಡಿದ್ದು, ಅದರಲ್ಲಿ ೨೦೧೧ರ ಬಳಿಕವೂ ಜನಿಸಿದ ಸಾವಿರದಷ್ಟು ಮಕ್ಕಳ ಹೆಸರೂ ಒಳಗೊಂಡಿವೆ. ಇವರೆಲ್ಲರೂ ಆರೋ ಗ್ಯ ಇಲಾಖೆಯ ಹೊಸ ಅಧಿಸೂಚನೆ ಯಂತೆ ಇನ್ನು ಈ ಯಾದಿಯಿಂದ ಹೊರಬೀಳಲಿದ್ದಾರೆ.

ಆರೋಗ್ಯ ಇಲಾಖೆಯ ಹೊಸ ಅಧಿಸೂಚನೆಯ ವಿರುದ್ಧ ಜಿಲ್ಲೆಯಲ್ಲಿ ವ್ಯಾಪಕ ಪ್ರತಿಭಟನೆಯೂ ಜತೆಗೆ ತಲೆಯೆತ್ತತೊಡಗಿದೆ. ಸರಕಾರದ ಇಂತಹ ತೀರ್ಮಾನದ ಹಿಂದೆ ಭಾರೀ ಒಳಸಂಚು ಅಡಗಿದೆ.  ಆದ್ದರಿಂದ ಈ ಆದೇಶವನ್ನು ಸರಕಾರ ತಕ್ಷಣ ಹಿಂತೆಗೆದು ಕೊಳ್ಳ ಬೇಕು ಇಲ್ಲವಾದಲ್ಲಿ ಉಗ್ರ ಹೋ ರಾಟ ನಡೆಸಲಾಗುವುದೆಂದು ಎಂ ಡೋಸಲ್ಫಾನ್  ಸಂತ್ರಸ್ತರ ಒಕ್ಕೂಟ ತಿಳಿಸಿದೆ.

Leave a Reply

Your email address will not be published. Required fields are marked *

You cannot copy content of this page