೩ ಕಿಲೋ ಚಿನ್ನಾಭರಣ ಅಪಹರಣ
ತೃಶೂರು: ಕಾರಿನಲ್ಲಿ ತಲುಪಿದ ತಂಡವೊಂದು ೩ ಕಿಲೋ ಚಿನ್ನವನ್ನು ಅಪಹರಿಸಿದ ಘಟನೆ ತೃಶೂರಿನಲ್ಲಿ ನಡೆದಿದೆ. ನಿನ್ನೆ ರಾತ್ರಿ ೧೧ ಗಂಟೆ ವೇಳೆ ಈ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿ ದ್ದಾರೆ. ತೃಶೂರಿನ ಆಭರಣ ತಯಾರಿ ಕೇಂದ್ರದಿಂದ ಕನ್ಯಾಕುಮಾರಿಯ ಚಿನ್ನಾಭರಣ ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ಚಿನ್ನವನ್ನು ತಂಡ ಅಪಹರಿಸಿದೆ.
ಆಭರಣ ತಯಾರಿ ಕೇಂದ್ರದ ಮೂವರು ನೌಕರರು ಚಿನ್ನ ದೊಂದಿಗೆ ನಿನ್ನೆ ರಾತ್ರಿ ೧೧ ಗಂಟೆಗೆ ಹೊರಟಿದ್ದರು. ಆಭರಣ ತಯಾರಿಕೇಂದ್ರದಿಂದ ರೈಲ್ವೇ ನಿಲ್ದಾಣದತ್ತ ನಡೆದು ಹೋಗುತ್ತಿ ದ್ದಾಗ ಬಿಳಿ ಕಾರಿನಲ್ಲಿ ತಲುಪಿದ ತಂಡ ಅವರ ಮೇಲೆ ದಾಳಿ ನಡೆಸಿ ಚಿನ್ನವನ್ನು ಅಪಹರಿಸಿದೆ ಯೆಂದು ದೂರಲಾಗಿದೆ.