೩ ಗ್ರಾಮ ಕಚೇರಿಗಳಿಗೆ ವಿಜಿಲೆನ್ಸ್ ದಾಳಿ

ಕಾಸರಗೋಡು: ಜನರು ನೀಡುವ ಅರ್ಜಿಗಳನ್ನು ಪರಿಶೀಲಿಸದೆ ಅದನ್ನು ಮೂಲೆಗುಂಪಾಗಿ ಇರಿಸಲಾಗುತ್ತಿದೆ ಯೆಂಬ ಆರೋಪಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮೂರು ಗ್ರಾಮ ಕಚೇರಿಗಳಿಗೆ ಕಾಸರಗೋಡು ವಿಜಿಲೆನ್ಸ್ ಡಿವೈಎಸ್ಪಿ ವಿ. ಉಣ್ಣಿಕೃಷ್ಣನ್ ನೇತೃತ್ವದ ವಿಜಿಲೆನ್ಸ್ ತಂಡ ದಾಳಿ ನಡೆಸಿ ಪರಿಶೀ ಲನೆ ನಡೆಸಿದೆ.  ಉಪ್ಪಳ, ಮುಳಿಯಾರು ಮತ್ತು ನೆಲ್ಲಿಕಟ್ಟೆಯಲ್ಲಿರುವ ಪಾಡಿ-ನೆಕ್ರಾಜೆ  ಗ್ರಾಮ ಕಚೇರಿಗಳಿಗೆ ಈ ದಾಳಿ ಮತ್ತು ಪರಿಶೀಲನೆ ನಡೆಸಲಾಗಿದೆ. ಕಾಸ ರಗೋಡು ಮಾತ್ರವಲ್ಲ ರಾಜ್ಯದಾದ್ಯಂತ ಹಲವು ಗ್ರಾಮ ಕಚೇರಿಗಳಲ್ಲಿ ನಿನ್ನೆ ಇಂ ತಹ ದಾಳಿ ನಡೆಸಲಾಗಿದೆ. ವಿಜಿಲೆನ್ಸ್ ಇನ್‌ಸ್ಪೆಕ್ಟರ್ ಗಳಾದ ಎಂ.ವಿ. ರಾಜೇಶ್ ಮತ್ತು ವಿ. ಬಾಬುರಾಜನ್ ಎಂಬವರು ಜಿಲ್ಲೆಯ ಲ್ಲಿ ದಾಳಿ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

You cannot copy contents of this page