ತೂಮಿನಾಡಿನಲ್ಲಿ ತಂಡಗಳ ಮಧ್ಯೆ ಘರ್ಷಣೆ: ಇಬ್ಬರ ಸೆರೆ

ಉಪ್ಪಳ: ಕುಂಜತ್ತೂರು ತೂಮಿನಾಡಿನಲ್ಲಿ ನಿನ್ನೆ ರಾತ್ರಿ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿದ್ದು,ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ಬಲ್ಲಂಕೋಡು ನ್ಯೂ ಹೌಸ್ ಸಯ್ಯದ್ ಅಮೀನ್ (19), ಬಂಗ್ರಮಂಜೇಶ್ವರ ರಹ್ಮತ್ ನಗರ ಅಶ್ಫಾಕ್ ಮಂಜಿಲ್‌ನ ಮೊಹಮ್ಮದ್ ಅಶ್ಫಾಕ್ (18) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನ್ನೆ ರಾತ್ರಿ 11 ಗಂಟೆ ವೇಳೆ ತೂಮಿನಾಡಿನಲ್ಲಿ  ಎರಡು ತಂಡಗಳು ಘರ್ಷಣೆ ನಿರತರಾಗಿರುವ ಬಗ್ಗೆ  ಮಂಜೇಶ್ವರ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐ ಉಮೇಶ್, ಎಎಸ್‌ಐ ಬೈಜು,  ಪ್ರೊಬೆಷನರಿ ಎಸ್‌ಐ ಶಬರಿಕೃಷ್ಣನ್ ಎಂಬಿವರು ಕೂಡಲೇ ಅಲ್ಲಿಗೆ ತೆರಳಿ  ಇಬ್ಬರನ್ನು ಬಂಧಿಸಿದ್ದು ಇತರರು ಓಡಿ ಪರಾರಿಯಾಗಿದ್ದಾರೆನ್ನಲಾಗಿದೆ.

RELATED NEWS

You cannot copy contents of this page