ಕುಟುಂಬ ಕಲಹ ಪರಿಹರಿಸಲು ತಲುಪಿದ ಪೊಲೀಸ್‌ಗೆ ಇರಿದು ಗಾಯ: ಸಹೋದ್ಯೋಗಿ ಸೆರೆ

ತಿರುವನಂತಪುರ: ಕುಟುಂಬ ಕಲಹ ಪರಿಹರಿಸಲು ತಲುಪಿದ ಪೊಲೀಸ್‌ಗೆ ಇರಿದು ಗಾಯಗೊಳಿಸಿದ ಘಟನೆಯಲ್ಲಿ ಸಹೋದ್ಯೋಗಿ ಪೊಲೀಸ್‌ನನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರ ವಿಕಾಸ್‌ಭವನ್ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಇತ್ತೀಚೆಗೆ ಘಟನೆ ನಡೆದಿದೆ. ಎ.ಆರ್ ಕ್ಯಾಂಪ್‌ನ ಉದ್ಯೋಗಿಯಾದ ಅನೀಶ್‌ನನ್ನು ಸೆರೆಹಿಡಿಯಲಾಗಿದೆ. ಮ್ಯೂಸಿಯಂ ಪೊಲೀಸ್ ಠಾಣೆಯ ಅಧಿಕಾರಿಯಾದ ಅನ್ಸಾರ್‌ಗೆ ಇರಿಯಲಾಗಿದೆ. ಕಿವಿಗೆ ಗಾಯಗೊಂಡ ಅನ್ಸಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ನೆರೆಮನೆ ನಿವಾಸಿಯಾದ ಪೊಲೀಸ್‌ನ ಮನೆಯ ಕುಟುಂಬ ಕಲಹ ಪರಿಹರಿಸಲು ಇವರು ತಲುಪಿದ್ದರು. ಅನೀಶ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾನೆಂದು ೧೧೨ರಲ್ಲಿ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅನ್ಸಾರ್ ಸ್ಥಳಕ್ಕೆ ತಲುಪಿದ್ದರು. ಕುಟುಂಬ ಕಲಹ ಪರಿಹರಿಸುತ್ತಿದ್ದ ಮಧ್ಯೆ ದ್ವೇಷಗೊಂಡ ಅನೀಶ್ ಅನ್ಸಾರ್‌ಗೆ ಇರಿದಿದ್ದಾನೆನ್ನಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

You cannot copy contents of this page