ಮಾಯಿಪ್ಪಾಡಿಗುತ್ತು ತರವಾಡು ಮನೆಯಲ್ಲಿ ದೈವಕೋಲ

ಮಾಯಿಪ್ಪಾಡಿ: ಮಾಯಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ಶ್ರೀ ಧೂಮಾವತಿ ದೈವದ ಧರ್ಮನೇಮ ಮತ್ತು ಶ್ರೀ ಕೊರತಿ ದೈವದ ಕೋಲ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಗಣಹೋಮ, ತಂಬಿಲ, ಪಾನಕಪೂಜೆ, ಅನ್ನ ಸಂತರ್ಪಣೆ ಮಾಯಿಪ್ಪಾಡಿ ಶ್ರೀ ದುರ್ಗಾ ಮಹಿಳಾ ಭಜೇಶ್ವರಿ ಭಜನಾ ಸಂಘ ಮತ್ತು ಮಾಯಿಪಾಡಿಗುತ್ತು ಕುಟುಂ ಬಸ್ಥರಿಂದ ಭಜನೆ ನಡೆಯಿತು. 
ಪುತ್ತೂರುಕೊಟ್ಯದಿಂದ ಮಾಯಿಪ್ಪಾಡಿಗುತ್ತು ತರವಾಡಿಗೆ ಭಂಡಾರ ಆಗಮಿಸಿತು. ಎರಡು ಹರಕೆಯ ಕೊರತಿಕೋಲ ಸೇರಿದಂತೆ ಮೂರು ದಿನ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.

RELATED NEWS

You cannot copy contents of this page