೪ ಕಿಲೋ ಗಾಂಜಾ ಸಾಗಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಮತ್ತೆ ಗಾಂಜಾದೊಂದಿಗೆ ಸೆರೆ
ಕಾಸರಗೋಡು: ಕಳೆದ ವರ್ಷ ಕಾಸ ರಗೋಡು ಅಬಕಾರಿ ತಂಡ ಅಡ್ಕ ಬಳಿ ಯಿಂದ ೪ ಕಿಲೋ ಗಾಂಜಾ ವಶಪ ಡಿಸಿಕೊಂಡ ಪ್ರಕರಣದ ಆರೋಪಿ ಯಾದ ಮಹಿಳೆಯನ್ನು ಕಾಸರಗೋಡು ಎಕ್ಸೈಸ್ ಎನ್ಫೋರ್ಸ್ಮೆಂಟ್ ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್ನ ಸರ್ಕಲ್ ಇನ್ಸ್ಪೆಕ್ಟರ್ ಶಂಕರ್ ಜಿ.ಎ ನೇತೃತ್ವದ ತಂಡ ನಿನ್ನೆ ಬಂದ್ಯೋಡು ಅಡ್ಕದಿಂದ ಬಂಧಿಸಿದೆ.
ಬಂದ್ಯೋಡು ಅಡ್ಕದ ಅಬ್ದುಲ್ ಸಮೀರ್ ಎಂಬಾತನ ಪತ್ನಿ ಸುಹರಾಬಿ (೩೭) ಬಂಧಿತಳಾದ ಆರೋಪಿ. ನಿನ್ನೆ ಬಂಧಿಸುವ ವೇಳೆ ಆಕೆಯ ಕೈಯಲ್ಲಿ ೩೦ ಗ್ರಾಂ ಗಾಂಜಾ ಇತ್ತೆಂದೂ, ಅದಕ್ಕೆ ಸಂಬಂಧಿಸಿ ಆಕೆಯ ವಿರುದ್ಧ ಬೇರೊಂದು ಎನ್ಡಿಪಿಎಸ್ ಪ್ರಕರಣ ದಾಖಲಿಸಲಾ ಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇಚ್ಲಂಗೋಡು, ಬಂದ್ಯೋಡು ಮತ್ತು ಅಡ್ಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಗಾಂಜಾ ಇತ್ಯಾದಿ ಮಾದಕದ್ರವ್ಯ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಆದ್ದರಿಂದ ಈ ಪ್ರದೇಶ ನಿವಾಸಿಗಳ ಸಹಾಯದಿಂದ ಅಲ್ಲಿ ಮಾದಕದ್ರವ್ಯ ತಡೆ ಸಮಿತಿಗೂ ರೂಪು ನೀಡಲಾಗಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ನಡೆಸಿದ ಈ ಅಬಕಾರಿ ಕಾರ್ಯಾಚರಣೆಯಲ್ಲಿ ಅಬಕಾರಿ ಪ್ರಿವೆಂಟಿವ್ ಆಫೀಸರ್ ಮುರಳಿ ಕೆ.ವಿ, ಜೇಮ್ಸ್ ಅಬ್ರಹಾಂ ಕುರಿಯಾ, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಅಜಿ ಸಿ, ಸತೀಶನ್.ಕೆ, ಸೋನು ಸೆಬಾಸ್ಟಿನ್ ಮತ್ತು ಮಹಿಳಾ ಎಕ್ಸೈಸ್ ಸಿವಿಲ್ ಆಫೀಸರ್ ಜೈಮೋಳ್ ಜೋನ್ ಎಂಬಿವರು ಒಳಗೊಂಡಿದ್ದರು. ಬಂಧಿತ ಆರೋಪಿಯನ್ನು ನಂತರ ಕಾಸ ರಗೋಡು ಪ್ರಥಮದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೧)ರಲ್ಲಿ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.