೫.೫೦ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ: ೧೦ ಮಂದಿ ಸೆರೆ

ಬೆಂಗಳೂರು: ಬೃಹತ್ ಡ್ರಗ್ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ೧೫ ದಿನಗಳಿಂದ ಡ್ರಗ್ ಸಾಗಾಟಗಾರರ ಚಟುವಟಿಕೆ ಬಗ್ಗೆ ಸಿಸಿಬಿ ಹದ್ದಿನ ಕಣ್ಣಿರಿಸಿದ್ದು, ನಿನ್ನೆ ಇವರನ್ನು ಬಂಧಿಸಲಾಗಿದೆ. ೮ ಮಂದಿ ವಿದೇಶಿಗಳು ಸೇರಿ ೧೦ ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ೫.೫೦ ಕೋಟಿ  ರೂ. ಮೌಲ್ಯದ ಮಾದಕ ಪದಾರ್ಥಗಳನ್ನು  ವಶಪಡಿಸಲಾಗಿದೆ.

ಈ ಮಾದಕಪದಾರ್ಥಗಳನ್ನು ಐಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ನೀಡಲು ಸಾಗಿ ಸಲಾಗಿದೆಯೆಂದು  ಆರೋಪಿಗಳು ತಿಳಿಸಿದ್ದಾರೆ. ಬಂಧಿತರಿಂದ ಎಂಡಿಎಂಎ ಕ್ರಿಸ್ಟಲ್ ೩,೮೦೬ ಮಾತ್ರೆ, ೫೦ ಗ್ರಾಂ ಕೊಕ್ಕೆನ್, ೫ ಕಿಲೋ ಗಾಂಜಾ, ೧ ಕಾರು, ೩ ಬೈಕ್, ೫ ಮೊಬೈಲ್ ವಶಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page