೯೦ ಕಿಲೋ ಗಾಂಜಾ ಸಾಗಾಟದಲ್ಲಿ ಸೆರೆಗೀಡಾದ ಇಬ್ಬರು ಮತ್ತೆ ಪೊಲೀಸ್ ಕಸ್ಟಡಿಗೆ

ಮಂಜೇಶ್ವರ: 90ಕಿಲೋ ಗಾಂಜಾ ಸಾಗಿಸುತ್ತಿದ್ದ ವೇಳೆ ಸೆರೆಗೀಡಾದ ಇಬ್ಬ ರನ್ನು ಹೆಚ್ಚಿನ ವಿಚಾರಣೆಗಾಗಿ ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೂತುಪರಂಬ ಕಣ್ಣವಂ ನಿವಾಸಿಯೂ ತೃಕ್ಕರಿಪುರದಲ್ಲಿ ವಾಸವಾಗಿರುವ ರೈಫ್ ಬಶೀರ್ [31] ಹಾಗೂ ಪುದಿಯಂಗಾಡಿ ಮುಳ್ಳನ್‌ತಕ್ಕತ್ ನಿವಾಸಿ ಮೊಹಮ್ಮದ್ ರಿಯಾಸ್ [29] ನನ್ನು ಮೂರು ದಿನ ಕಸ್ಟಡಿಗೆ ಪಡೆಯ ಲಾಗಿದೆ. ಸೆರೆಗೀಡಾಗಿ ರಿಮಾಂಡ್ ನಲ್ಲಿದ್ದ ಇವರನ್ನು ಸಿ.ಐ ರಜೀಶ್ ನೇತೃತ್ವದಲ್ಲಿ ಮೊನ್ನೆ ಕÀಸ್ಟಡಿಗೆ ತೆಗೆದು ಕೊಂಡಿದ್ದಾರೆ. ಈ ತಿಂಗಳ 15ರಂದು ರಾತ್ರಿ 10.30ರ ಕಾರಿನಲ್ಲಿ ಗಾಂಜಾ ಸಾಗಿಸುತಿದ್ದ ವೇಳೆ ಬಾಯಿಕಟ್ಟೆಯಿಂದ ಪೊಲೀಸರು ಕಾರನ್ನು ತಡೆದು ಗಾಂಜಾ ವಶಪಡಿಸಿದ್ದರು. ಈ ವೇಳೆ ರೈಫ್ ಬಶೀರ್ ಸೆರೆಗೀಡಾಗಿದ್ದನು. ಪರಾರಿಯಾದ ರಿಯಾಸ್‌ನ್ನು ಮರುದಿನ ಸೆರೆ ಹಿಡಿದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page