೯೦ ಕಿಲೋ ಗಾಂಜಾ ಸಾಗಾಟ : ಪರಾರಿಯಾದ ಆರೋಪಿ ಬಂಧನ

ಮಂಜೇಶ್ವರ: ಕಾರಿನಲ್ಲಿ ೯೦ ಕಿಲೋ ಗಾಂಜಾ ಸಾಗಾಟ ನಡೆಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಸೆರೆ ಹಿಡಿಯಲಾಗಿದೆ.

ಪಳಯಂಗಾಡಿ ನಿವಾಸಿ ರಿಯಾಸ್ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಮೊನ್ನೆ ರಾತ್ರಿ ಗಾಂಜಾ ಸಾಗಾಟ ನಡೆದಿದ್ದು, ಅದರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ರಿಯಾಸ್ ಓಡಿ ಪರಾರಿ ಯಾಗಿದ್ದನು. ಕಾಞಂಗಾಡ್ ಡಿವೈಎಸ್ಪಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಮಂಜೇಶ್ವರ ಪೊಲೀಸ್ ಹಾಗೂ ಡಿವೈಎಸ್ಪಿ ನೇತೃತ್ವದ ಪ್ರತ್ಯೇಕ ಸ್ಕ್ವಾಡ್ ಪೈವಳಿಕೆ ಬಳಿಯ ಬಾಯಿಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾರಿನಿಂದ ೯೦ ಕಿಲೋ ಗಾಂಜಾ ವಶ ಪಡಿಸಲಾಗಿದೆ. ಮುಖ್ಯ ಆರೋಪಿಯಾದ ಕೂತುಪರಂಬ ಕಣ್ಣವಂನ ರೈಫ್ ಬಶೀರ್‌ನನ್ನು ಅಂದು ರಾತ್ರಿಯೇ ಸೆರೆ ಹಿಡಿಯ ಲಾಗಿತ್ತು. ಈ ವೇಳೆ ರಿಯಾಸ್ ತಪ್ಪಿಸಿಕೊಂಡಿದ್ದನು.

ಸೆರೆಗೀಡಾದ ರಿಯಾಸ್ ಹಾಗೂ ರೈಫ್ ಬಶೀರ್ ಖಾಸಗಿ ಬಸ್‌ನ ನೌಕರರಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಯಾದ ಈತ ಜೈಲಿನಲ್ಲಿದ್ದಾಗ ಪರಿಚಯ ಗೊಂಡ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರ ಣವೊಂದರ ಆರೋಪಿ ಯೊಂದಿಗೆ ಸೇರಿ ಗಾಂಜಾ ಸಾಗಾಟಕ್ಕೆ ಯೋಜನೆ ಹಾಕಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page