ಅಂಗಡಿಯ ಬೋರ್ಡ್‌ನಲ್ಲಿ ಸಿಲುಕಿಕೊಂಡ ನಾಯಿ ಮರಿಯನ್ನು ರಕ್ಷಿಸಿದ ಅಗ್ನಿಶಾಮಕದಳ
ಕಾಸರಗೋಡು: ನಗರದ ವ್ಯಾಪಾರ ಸಂಸ್ಥೆಯೊಂದರ ಬೋರ್ಡ್‌ನ ಮೇಲೆ ಕಳೆದ ಎರಡು ದಿನಗಳಿಂದ ಸೇವಿಸಲು ನೀರು, ಆಹಾರ ಲಭಿಸದೆ ಸಿಲುಕಿಕೊಂಡಿದ್ದ ನಾಯಿ ಮರಿಯನ್ನು ಅಗ್ನಿಶಾಮಕದಳ ರಕ್ಷಿಸಿದ ಘಟನೆ ನಡೆದಿದೆ. ನಗರದ ಹಳೆ ಪ್ರೆಸ್‌ಕ್ಲಬ್ ಜಂಕ್ಷನ್ ಬಳಿಯ ಅಂಗಡಿಯೊಂದರ ಬೋರ್ಡ್‌ನಲ್ಲಿ ಈ ನಾಯಿಮರಿ ಸಿಲುಕಿಕೊಂಡು ಎರಡು ದಿನಗಳಿಂದ ಒದ್ದಾಡುತ್ತಿತ್ತು. ಅದನ್ನು ಕಂಡ ಅಂಗಡಿ ಸಿಬ್ಬಂದಿ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ವಿ.ಎಸ್ ವೇಣುಗೋಪಾಲನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ಸ್ಥಳಕ್ಕೆ ಆಗಮಿಸಿ ಅಂಗಡಿ ಬೋರ್ಡ್‌ನಲ್ಲಿ ಸಿಲುಕಿಕೊಂಡಿದ್ದ ನಾಯಿಮರಿಯನ್ನು ಅಲ್ಲಿಂದ ಹೊರತೆಗೆದು ಅದರ ಪ್ರಾಣ ರಕ್ಷಿಸಿದರು.