ಹೃದಯಘಾತ ಅಧ್ಯಾಪಿಕೆ ನಿಧನ

ಉಪ್ಪಳ: ಇಲ್ಲಿಗೆ ಸಮೀಪದ ಜಯ ನಗರ ನಿವಾಸಿ ಚಂದ್ರರಾಜ್ ಆಚಾರ್ಯ ಐಲ್ ಇವರ ಪತ್ನಿ ಅಧ್ಯಾ ಪಿಕೆ ಮಲ್ಲಿಕ [50] ನಿಧನರಾದರು. ಇವರಿಗೆ ನಿನ್ನೆ ಮುಂಜಾನೆ ಮನೆಯಲ್ಲಿ ಹೃದಯಘಾತ ಉಂಟಾಗಿದೆ. ಕೂಡಲೇ ಉಪ್ಪಳದ ಖಾಸಗಿ ಆಸ್ಪತ್ರೆಗೆ ತಲುಪಿಸುವ ಮೊದಲೇ ದಾರಿ ಮಧ್ಯೆ ನಿಧನರಾದರು. ಇವರು ಮಂಜೇಶ್ವರ, ನಯಬಜಾರ್, ಬಂಬ್ರಾಣ ಖಾಸಗಿ ಶಾಲೆಗಳಲ್ಲಿ ಅಧ್ಯಾಪಿಕೆಯಾಗಿ ಸೇವೆಗೈದಿದ್ದರು. ಮೃತರು ಪತಿ, ಮಕ್ಕಳಾದ ಹೃತಿಕರಾಜ್, ಹೃಷಿತರಾಣಿ, ಸಹೋದರರಾದ ವಾಮನ, ಗಣೇಶ, ಶಂಕರ, ಕಿಶೋರ, ಸಹೋದರಿ ತ್ರಿವೇಣಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಸುಬ್ರಾಯ ಆಚಾರ್ಯ, ತಾಯಿ ಗಿರಿಜ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page