ಅಂಬಿತ್ತಡಿ ಅಂಗನವಾಡಿಯನ್ನು ಊರವರು ಖರೀದಿಸಿದ ಸ್ಥಳದಲ್ಲೇ ನಿರ್ಮಿಸಲು ಒತ್ತಾಯಿಸಿ ಕ್ರಿಯಾ ಸಮಿತಿಯಿಂದ ಮಂಜೇಶ್ವರ ಪಂಚಾಯತ್‌ಗೆ ಮಾರ್ಚ್

ಮಂಜೇಶ್ವರ: ಅಂಬಿತ್ತಡಿ ಅಂಗನವಾಡಿಯನ್ನು ಊರವರು ಖರೀದಿಸಿದ ಸ್ಥಳದಲ್ಲೇ ನಿರ್ಮಿಸಬೇಕೆಂದು ಆಗ್ರಹಿಸಿ ಅಂಬಿತ್ತಡಿ ಕ್ರಿಯಾ ಸಮಿತಿ ವತಿಯಿಂದ ಮಂಜೇಶ್ವರ ಪಂಚಾಯತ್‌ಗೆ ಪ್ರತಿಭಟನಾ ಜಾಥಾ ಹಾಗೂ ಧರಣಿ ನಡೆಯಿತು. ಮಂಜೇಶ್ವರ ಚರ್ಚ್ ಪರಿಸರದಿಂದ ಆರಂಭಗೊAಡ ಪ್ರತಿಭಟನಾ ಜಾಥಾದಲ್ಲಿ ಅಂಗನವಾಡಿ ಮಕ್ಕಳ ಪೋಷಕರು, ಊರವರು, ಮಹಿಳೆಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು. ಬಳಿಕ ಪಂಚಾಯತ್ ಮುಂಭಾಗದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಸಿಪಿಐ ಹಿರಿಯ ನೇತಾರ ಬಿ ವಿ ರಾಜನ್ ಉದ್ಘಾಟಿಸಿದರು. ಬಶೀರ್ ಎಸ್ ಎಂ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಹೊಸಂಗಡಿ, ಅಶ್ರಫ್ ಕುಂಜತ್ತೂರು, ಅಶ್ರಫ್ ಬಡಾಜೆ, ಬಶೀರ್ ಕನಿಲ, ರಮೇಶ್, ಶಹನಾಜ್, ಜಬ್ಬಾರ್ ಬಹರೈನ್, ಅಶ್ರಫ್, ರಜಾಕ್, ಕುಂಞ, ರಜಾಕ್ ಕೆ ಎ, ಮಜೀದ್ ಉಪಸ್ಥಿತರಿದ್ದರು. ಅಂಬಿತ್ತಾಡಿ ನಿವಾಸಿಗಳಾದ ನೌಫಲ್, ಸೈಪು, ಹಮೀದ್, ರಮೀಝ್, ಪೈಸಲ್ ಮಚ್ಚಂಪ್ಪಾಡಿ, ಮೊÊದೀನ್ ಮಚ್ಚಂಪಾಡಿ ನೇತೃತ್ವದ ನೀಡಿದರು. ಅಶ್ರಫ್ ಬಡಾಜೆ ಸ್ವಾಗತಿಸಿ, ನೌಫಲ್ ವಂದಿಸಿದರು. ಅಂಗನವಾಡಿ ವಿಷಯದಲ್ಲಿ ರಾಜಕೀಯ ಲಾಭವನ್ನು ಪಡೆಯಲು ಮುಂದಾಗಿರುವ ಜನಪ್ರತಿನಿಧಿಗಳ ಹಾಗೂ ರಾಜಕೀಯ ಪಕ್ಷಗಳ ನೇತಾರರ ಹಾಗೂ ಕಾರ್ಯಕರ್ತರ ವಿರುದ್ಧ ಪ್ರತಿಭಟನೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿಯ ಹೆಸರಿನಲ್ಲಿ ರಾಜಕೀಯ ಕೆಸರೆರಚಾಟವನ್ನು ಮುಂದುವರಿಸಿಕೊAಡು ಬಂದಿರುವ ರಾಜಕೀಯ ಪಕ್ಷಗಳ ನೇತಾರರು ಊರವರು ಸ್ವಂತವಾಗಿ ಖರೀದಿಸಿರುವ ಸ್ಥಳದಲ್ಲಿ ಅಂಗನವಾಡಿಯನ್ನು ನಿರ್ಮಿಸದೇ ಬಾಡಿಗೆಗೆ ಕೊಠಡಿ ಪಡೆದು ಅತ್ತಿತ್ತ ಕೊಂಡೊಯ್ಯುತ್ತಿರುವುದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪೋಷಕರು ತಮ್ಮ ಅಸಮಧಾನವನ್ನು ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page