ಕಾಸರಗೋಡು: ಅಂಗನವಾಡಿ ಎದುರುಗಡೆ ಸ್ಥಾಪಿಸಲಾಗಿದ್ದ ಧ್ವಜಸ್ತಂ ಭದ ಹಗ್ಗದಲ್ಲಿ ಕುತ್ತಿಗೆ ಸಿಲುಕಿ ಆರನೆ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಹೊಸದುರ್ಗಕ್ಕೆ ಸಮೀಪದ ಕಾಂಞ್ಞರ ಪೊಯಿಲ್ ಸರಕಾರಿ ಹೈಸ್ಕೂಲಿನ ಆರನೇ ತರಗತಿಯ ವಿದ್ಯಾರ್ಥಿ ಅನೈಕ್ (11) ಸಾವನ್ನಪ್ಪಿದ ಬಾಲಕ.
ಮಡಿಕೈಗೆ ಸಮೀಪದ ನಾನಂದಕುಳಿಯ ಅಂಗನವಾಡಿಯ ಅಂಗಳದಲ್ಲಿ ಸ್ಥಾಪಿಸಿದ್ದ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಪ್ಲಾಸ್ಟಿಕ್ ಹಗ್ಗ ಕುತ್ತಿಗೆಗೆ ಸಿಲುಕಿ ಅನೈಕ್ ನಿನ್ನೆ ಸಂಜೆ ಸುಮಾರು ೫ ಗಂಟೆಯ ವೇಳೆಗೆ ಪತ್ತೆಯಾಗಿದ್ದಾನೆ. ಆ ವೇಳೆ ಶಾಲೆಯ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾ ಚಾಲಕ ವಿನೋದ್ ಎಂಬವರು ಮೊದಲು ಅದನ್ನು ಕಂಡರು. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮೊದಲು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ನಂತರ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದ್ದು, ಇಂದು ಮರಣೋತ್ತರ ಪರೀಕ್ಷೆಗೊಳಪಡಿಸಲಾ ಯಿತು. ಮರಣೋತ್ತರ ಪರೀಕ್ಷಾ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೈ ಮೂನ್ನುರೋಡಿನ ರಾಜೇಶ್- ನೀತು ದಂಪತಿಯ ಏಕೈಕ ಪುತ್ರನಾಗಿರುವ ಅನೈಕ್ ನಿನ್ನೆ ಸಂಜೆ 4 ಗಂಟೆಗೆ ಬಸ್ನಲ್ಲಿ ಮನೆಗೆ ಬಂದು ಬಟ್ಟೆ ಬದಲಾಯಿಸಿ ಅಲ್ಲೇ ಪಕ್ಕದ ಅಂಗನವಾಡಿಯ ಬಳಿ ಆಟವಾಡಲೆಂದು ಹೋಗಿದ್ದನು. ಆ ವೇಳೆ ಆತನ ಹೆತ್ತವರು ಕೆಲಸಕ್ಕೆ ಹೋಗಿದ್ದರು. ಧ್ವಜಸ್ತಂಭದ ಹಗ್ಗ ಆಕಸ್ಮಾತ್ ಕುತ್ತಿಗೆಗೆ ಬಿಗಿಯಲ್ಪಟ್ಟು ಆತ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.





