ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಗೆ ಕೇರಳದ ಜನತೆಯಿಂದ ಅನುಕೂಲ ನಿಲುವು ಉಂಟಾಗಿದೆ-ಕೆ. ಸುರೇಂದ್ರನ್
ಕಾಸರಗೋಡು: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕೇರಳದ ಜನತೆಯಿಂದ ಅನುಕೂಲಕರ ನಿಲುವು ಉಂಟಾಗಿ ದೆಯೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಇಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಭಾಗವ ಹಿಸಿ ಅವರು ಮಾತನಾಡುತ್ತಿದ್ದರು. ಆಡಳಿತ ಒಕ್ಕೂಟವಾದ ಎಡರಂಗ ಮತ್ತು ಐಕ್ಯರಂಗ ಅಯೋಧ್ಯೆ ವಿಷಯದಲ್ಲಿ ತಳೆದ ನಿಲುವುಗಳು ಎಲ್ಲಾ ಹಿಂದೂ ಸಂಘಟನೆಗಳು ಸಾರಾಸಗಟಾಗಿ ತಿರಸ್ಕರಿಸಿವ.
ಎಸ್ಎನ್ಡಿಪಿ, ನಾಯರ್ಸ್ ಸರ್ವೀಸ್ ಸೊಸೈಟಿ, ಕೇರಳ ಧೀವರ ಸಭಾ, ವಿಶ್ವಕರ್ಮ ಸಂಘಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವಿಭಾ ಗಕ್ಕೆ ಸೇರಿದ ಎಲ್ಲಾ ಸಂಘಟನೆಗಳು ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರವನ್ನು ತಮ್ಮ ಕಚೇರಿಗಳಲ್ಲಿ ಟಿವಿ ಮೂಲಕ ಪ್ರದರ್ಶಿಸಿದೆ. ಮಾತ್ರವಲ್ಲ್ಲ ಅಂದು ಸಂಜೆ ತಮ್ಮ ಕಚೇರಿಗಳು ಮತ್ತು ಮನೆಗಳ ಲ್ಲೂ ದೀಪ ಬೆಳಗಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಕೇರಳದ ಆಡಳಿತ ಮತ್ತು ವಿಪಕ್ಷಗಳು ನೀಡಿದ ಆಹ್ವಾನಗಳನ್ನು ಪೂರ್ಣವಾಗಿ ತಿರಸ್ಕರಿಸಿ ಈ ಮೂಲಕ ಶ್ರೀರಾಮ ಕ್ಷೇತ್ರದ ಪ್ರಾಣ ಪ್ರತಿಷ್ಟೆಗೆ ಬೆಂಬಲ ವ್ಯಕ್ತಪಡಿಸಿವೆದ್ದಾರೆ ಎಂದು ಸುರೇಂದ್ರನ್ ತಿಳಿಸಿದ್ದಾರೆ.