ಅಸಹಾಯಕ ವೃದ್ದನ ಕೈಬಿಟ್ಟ ವರ್ಕಾಡಿ ಪಂಚಾಯತ್ ವಿರುದ್ಧ ಬಿಜೆಪಿ ಹೋರಾಟಕ್ಕೆ
ವರ್ಕಾಡಿ: ಪಂಚಾಯತ್ ವ್ಯಾಪ್ತಿ ಯ 3ನೇ ವಾರ್ಡ್ ನಾಟೆಕಲ್ಲು ತೌಡು ಗೋಳಿ ಸಮೀಪದ ನಿವಾಸಿ 73 ವರ್ಷ ದ ಅಣ್ಣಪ್ಪ ನಾಯ್ಕ್‌ರಿಗೆ ಯಾವುದೇ ಸಹಾಯ ಪಂಚಾಯತ್ ನೀಡುತ್ತಿಲ್ಲ ವೆಂದು ಬಿಜೆಪಿ ಪಂ. ಸಮಿತಿ ಆರೋಪಿ ಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅಣ್ಣಪ್ಪ ನಾಯ್ಕ್ ತನ್ನ ಅಸಹಾಯಕ ಸ್ಥಿತಿಯನ್ನು ಪಂಚಾಯತ್ ಅಧಿಕಾರಿ ಗಳಿಗೆ ತಿಳಿಸಿದರೂ ಆರೋಗ್ಯ ಇಲಾಖೆ ಯಾಗಲೀ, ಪಂಚಾಯತ್ ಆಡಳಿತ ವಾಗಲೀ ಬೇಜವಾಬ್ದಾರಿತನ ಪ್ರದರ್ಶಿ ಸಿದೆ ಎಂದು ಬಿಜೆಪಿ ದೂರಿದೆ. ಯಾವು ದೇ ಕ್ಷಣದಲ್ಲಿ ಮುರಿದು ಬೀಳಲು ಸಿದ್ಧವಾಗಿ ನಿಂತಿರುವ ಮನೆಯಲ್ಲಿ ಏಕಾಂಗಿಯಾಗಿರುವ ಇವರ ಔಷಧಿಗೆ, ದಿನನಿತ್ಯದ ವೆಚ್ಚಕ್ಕೆ ಕಷ್ಟ ಪಡುತ್ತಿದ್ದು, ಇವರನ್ನು ಕಡು ಬಡತನದ ಪಟ್ಟಿಯಲ್ಲಿ ಸೇರಿಸದೆ, ಔಷಧ ನೀಡದೆ, ಮನೆ ದುರಸ್ತಿಗೆ ಸಹಾಯ ನೀಡದೆ ಪಂಚಾಯತ್ ಸತಾಯಿಸುತ್ತಿದೆ ಎಂದು ಬಿಜೆಪಿ ಮುಖಂಡರು ದೂರಿದ್ದಾರೆ.
ಆಶಾಕಾರ್ಯಕರ್ತೆಯರಾಗಲೀ, ಪಾಲಿಯೇಟಿವ್ ಕೇರ್ ವಿಭಾಗವಾ ಗಲೀ ಇವರತ್ತ ತಿರುಗಿ ನೋಡುತ್ತಿಲ್ಲ ವೆಂದು ಬಿಜೆಪಿ ದೂರಿದೆ. ಸಂಕಷ್ಟ ಸ್ಥಿತಿ ಯಲ್ಲಿರುವ ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿ ಸಲು ಪಂಚಾಯತ್ ಮುಂದಾಗ ಬೇಕು. ಇಲ್ಲದಿದ್ದರೆ ಪಂಚಾಯತ್‌ನ ಬೇಜವಾ ಬ್ದಾರಿತನ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದೆ. ಈ ಬಗ್ಗೆ ಬಿಜೆಪಿ ಕೋರ್ ಸಭೆ ಜರಗಿದ್ದು, ಮುಖಂ ಡರಾದ ಭಾಸ್ಕರ ಪೊಯ್ಯೆ, ಆದರ್ಶ್ ಬಿ.ಎಂ, ಮಣಿಕಂಠ ರೈ, ಯತಿರಾಜ್ ಶೆಟ್ಟಿ, ಎ.ಕೆ. ಕಯ್ಯಾರ್, ವಿವೇಕಾನಂದ, ನಾಗೇಶ್ ಬಳ್ಳೂರು, ರವಿರಾಜ್ ಭಾಗವಹಿಸಿದರು.