ಅಸೌಖ್ಯ: ಟೈಲರ್ ನಿಧನ

ಮುಳ್ಳೇರಿಯ: ಇಲ್ಲಿಗೆ ಸಮೀಪದ ಕಾರ್ಲೆ ನಿವಾಸಿ ನಾರಂಪಾಡಿಯಲ್ಲಿ ಟೈಲರಿಂಗ್ ಅಂಗಡಿ ನಡೆಸುತ್ತಿದ್ದ ಮಾಲಿಂಗ ಪಾಟಾಳಿ (54) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಿನ್ನೆ  ನಿಧನಹೊಂದಿದ್ದಾರೆ. ದಿ| ಸುಬ್ಬ ಪಾಟಾಳಿ- ದಿ| ಅಬ್ಬು ದಂಪತಿ ಪುತ್ರನಾಗಿದ್ದಾರೆ. ಈ ಹಿಂದೆ ಕೊಲ್ಲಿಯಲ್ಲಿದ್ದ ಇವರು ಬಳಿಕ ನಾರಂಪಾಡಿಯಲ್ಲಿ ಟೈಲರಿಂಗ್ ಅಂಗಡಿ ಆರಂಭಿಸಿದ್ದಾರೆ. ಮುಳ್ಳೇರಿಯ ಪೇಟೆಯಲ್ಲೂ ಹಲವು ವರ್ಷಗಳ ಕಾಲ ಟೈಲರ್ ಆಗಿದ್ದ ಇವರು ಹವ್ಯಾಸಿ ನಾಟಕ ಕಲಾವಿ ದರೂ ಆಗಿದ್ದರು. ಕೋಟಿಚೆನ್ನಯ ನಾಟಕದಲ್ಲಿ ಎಂಬ ಚೆನ್ನಯ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದರು.

ಮೃತರು ಪತ್ನಿ ಅನಿತ, ಮಕ್ಕ ಳಾದ ಅಖಿಲ, ಅನಘ, ಸಹೋz ರರಾದ ನಾರಾಯಣ ಪಾಟಾಳಿ, ಮೋಹನ, ಮಧು ಸೂದನ, ಸಹೋದರಿಯರಾದ ಸಾವಿತ್ರಿ, ರಾಜೀವಿ, ಕಮಲ, ಪುಷ್ಪಲತಾ, ಜಯಶೀಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವೆ ಸಹೋದರಿ ಲೀಲಾ ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page