ಪೆರಿಯ ಕಲ್ಯೋಟ್ ಅವಳಿ ಕೊಲೆ ಸಿಪಿಎಂ ಕಾರ್ಯಕರ್ತನ ಮನೆಗೆ ಆಕ್ರಮಿಸಿದ ಪ್ರಕರಣದಲ್ಲಿ 7 ಆರೋಪಿಗಳಿಗೆ ಸಜೆ, ದಂಡ

ಕಾಸರಗೋಡು: 2019 ಮೇ 5ರಂದು ಸಂಭವಿಸಿದ ಪೆರಿಯ ಅವಳಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕಲ್ಯೋ ಟ್ ಬಲಿಕ್ಕಳದ ಸಿಪಿಎಂ ಕಾರ್ಯಕರ್ತ ವತ್ಸರಾಜ್‌ರ ಮನೆ ಹಾಗೂ ಅಲ್ಲಿದ್ದ ಪೊಲೀಸ್‌ನನ್ನು ಆಕ್ರಮಿಸಿ ಕಲ್ಯೋಟ್ ಪರಿಸರಗಳಲ್ಲಿ ಆಕ್ರಮಣಗಳನ್ನು ನಡೆಸಿರುವುದಾಗಿ ನೀಡಿದ ದೂರಿನಲ್ಲಿ ಆರೋಪಿಗಳಾದ ಕಾಂಗ್ರೆಸ್ ಕಾರ್ಯಕರ್ತರಿಗೆ ನ್ಯಾಯಾಲಯ 8 ವರ್ಷ ಸಜೆ ಹಾಗೂ 91,೦೦೦ ರೂ. ದಂಡ  ತೀರ್ಪು ನೀಡಿದೆ.

ಕಾಸರಗೋಡು ಹೆಚ್ಚುವರಿ ಜಿಲ್ಲಾ ಮತ್ತು ಶೆಷನ್ಸ್ ನ್ಯಾಯಾಲಯ (3) ಇದರ ನ್ಯಾಯಾಧೀಶ ಅಚಿಂತ್ಯರಾಜ್ ಉಣ್ಣಿ ಈ ತೀರ್ಪು ನೀಡಿದ್ದಾರೆ. ವತ್ಸರಾಜ್‌ರ ಮನೆ ಹಾಗೂ ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ನನ್ನು ಆಕ್ರಮಿಸಿದ್ದು, ಮಾಹಿತಿ ತಿಳಿದು ತಲುಪಿದ ಪೊಲೀಸ್ ತಂಡಕ್ಕೆ ಗಂಭೀರ ಆಕ್ರಮಣ ನಡೆಸಿದ ಪ್ರಕರಣದ ಆರೋ ಪಿಗಳಾದ ಕಾಂಗ್ರೆಸ್ ಕಾರ್ಯಕರ್ತರಿಗೆ  ನಾಲ್ಕು ವರ್ಷ ಕಠಿಣ ಸಜೆ ಹಾಗೂ 5೦,೦೦೦ ರೂ. ದಂಡ ಹೇರಿ ತೀರ್ಪು ನೀಡಲಾಗಿದೆ. ಇದರ ಹೊರತಾಗಿ 332 ಕಾಯ್ದೆಯನುಸಾರ ಒಂದು ವರ್ಷ ಸಜೆ, 5೦೦೦ ರೂ. ದಂಡ ಹಾಗೂ 143ನೇ ಕಾಯ್ದೆಯನುಸಾರ ಆರು ತಿಂಗಳ ಸಜೆ, 1೦೦೦ ರೂ. ದಂಡ, 148ನೇ ಕಾಯ್ದೆಯನುಸಾರ 1 ವರ್ಷ ಸಜೆ, 1೦,೦೦೦ ರೂ. ದಂಡ, 423ನೇ ಕಾಯ್ದೆಯನುಸಾರ 1 ವರ್ಷ ಸಜೆ, 2೦,೦೦೦ ರೂ. ದಂಡ, ೪೪೮ನೇ ಕಾಯ್ದೆಯನುಸಾರ 6 ತಿಂಗಳ ಸಜೆ, 5೦೦೦ ರೂ. ದಂಡ ಹೇರಿ ತೀರ್ಪು ನೀಡಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ಗೋಪಕುಮಾರ್ ಎಂ, ಸತೀಶನ್ ಎಂ.ಕೆ., ಸನಲ್ ಕುಮಾರ್ ಎ.ಕೆ, ವಿಜಿತ್ ಎಂ, ವಿವೇಕ್‌ಚಂದ್ರನ್, ಆನಂದ್ ಕೃಷ್ಣನ್, ಚಂದ್ರನ್ ಕೆ, ಗಿರೀಶ್ ಎ, ರವಿ ಎಂ, ಅನೀಶ್ ಕುಮಾರ್ ಎಂ. ಎಂಬಿವರ ಸಹಿತ ಗುರುತು ಹಚ್ಚಬಹುದಾದ ಇತರ ಇಬ್ಬರು ಪ್ರಕರಣದ ಯಥಾ ಕ್ರಮ 1ರಿಂದ 12ರವರೆಗಿನ ಆರೋಪಿಗಳಾಗಿದ್ದಾರೆ. ಪ್ರಥಮ ಆರೋಪಿಯಾದ ಗೋಪ ಕುಮಾರ್ ಎಂ, 6ನೇ ಆರೋಪಿ ಆನಂದ್‌ಕೃಷ್ಣನ್,10 ಆರೋಪಿ ಅನೀಶ್ ಕುಮಾರ್ ಎಂಬಿವರು ವಿಚಾರಣೆ ವೇಳೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಇವರ ಹೊರತಾಗಿ ತೀರ್ಪು ನೀಡಲಾಗಿದೆ. ಇವರ ವಿರುದ್ಧ ಮತ್ತೆ ನ್ಯಾಯಾಲಯ ತೀರ್ಪು ಕಲ್ಪಿಸಲಿದೆ. ಬೇಕಲ ಪೊಲೀಸರು ಕೇಸು ದಾಖಲಿಸಿದ್ದರು.

RELATED NEWS

You cannot copy contents of this page