ಆನ್ಲೈನ್ ಟ್ರೇಡಿಂಗ್ ಹೆಸರಲ್ಲಿ ಮಹಿಳೆಯಿಂದ 41 ಲಕ್ಷ ರೂ. ಪಡೆದು ವಂಚಿಸಿದ ಯುವಕ ಸೆರೆ
ಕಾಸರಗೋಡು: ವಾಟ್ಸಪ್ ಮೂಲಕ ಆನ್ಲೈನ್ ವ್ಯಾಪಾರ ಮರೆಯಲ್ಲಿ ಮಹಿಳೆಯನ್ನು ಕಬಳಿಸಿ 41 ಲಕ್ಷ ರೂಪಾಯಿ ಲಪಟಾಯಿಸಿದ ಮಲಪ್ಪುರಂ ನಿವಾಸಿಯನ್ನು ಸೈಬರ್ ಪೊಲೀಸರು ಸೆರೆ ಹಿಡಿದಿದ್ದಾರೆ. ಮಲಪ್ಪುರಂ ಮೇಲಾಟೂರು ನಿವಾಸಿ ಕೆ. ಜಾಫರ್ (49) ಎಂಬಾತನನ್ನು ಕಾಸರಗೋಡು ಸೈಬರ್ ಪೊಲೀಸರು ಮೋಲಾಟೂರ್ನಿಂದ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಪರಿಚಯಗೊಂಡ ಮಹಿಳೆಯನ್ನು ಆನ್ಲೈನ್ ವ್ಯಾಪಾರ ನಡೆಸಿ ಲಾಭಗಳಿಸ ಬಹುದೆಂದು ನಂಬಿಸಿ ಹಣ ಲಪಟಾಯಿ ಸಲಾಗಿದೆ. ಆರಂಭದಲ್ಲಿ ಸಣ್ಣ ಮೊತ್ತ ಪಡೆದು ನಂಬಿಕೆ ಮೂಡಿಸಲಾಗಿತ್ತು. ಅನಂತರ ಹೆಚ್ಚು ಮೊತ್ತ ಪಡೆದು ಆರೋಪಿ ವಂಚಿಸಿದ್ದಾನೆಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ದೂರು ದಾತೆಯ ಕೈಯಿಂದ ಹಲವು ಬಾರಿ ಯಾಗಿ 41 ಲಕ್ಷ ರೂಪಾಯಿಗಳನ್ನು ಜಾಫರ್ ಪಡೆದು ವಂಚಿಸಿದ್ದಾನೆ. ಯುವ ತಿಯ ದೂರಿನಂತೆ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರ ಮೇಲ್ನೋಟದಲ್ಲಿ ಸೈಬರ್ ಕ್ರೈಮ್ ಸ್ಟೇಶನ್ ಇನ್ಸ್ಪೆಕ್ಟರ್ ಇ. ಅನೂಪ್ ನೇತೃತ್ವದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಂಜಿತ್, ದಿಲೀಸ್ ಎಂಬಿವರು ಸೇರಿ ಆರೋಪಿಯನ್ನು ಬಂಧಿಸಿದ್ದಾರೆ.