ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್‌ನಿಂದ ವಿಷು ಕೊಡುಗೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ಈಸ್ಟ್ ಘಟಕ ಸಮಿತಿಯ ಆಶ್ರಯದಲ್ಲಿ ಘಟಕದ ಸಂಪೂರ್ಣ ಸದಸ್ಯರಿಗೆ ವಿಷು ಹಬ್ಬದಂ ಗವಾಗಿ ಹೊಸ ವಸ್ತ್ರ ನೀಡಲಾಯಿತು. ಕಾಸರಗೋಡು ವಲಯದ ಕಚೇರಿಯಲ್ಲಿ ಘಟಕದ ಅಧ್ಯಕ್ಷ ಅಜಿತ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ಘಟಕದ ಹಿರಿಯ ಸದಸ್ಯ ಗೋವಿಂದನ್ ಚಂಗರಕ್ಕಾಡ್ ಮಹಿಳಾ ಸದಸ್ಯೆಯಾದ ಪ್ರಿಯರಿಗೆ ನೀಡಿ ಉದ್ಘಾಟಿಸಿದರು. ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್, ಜಿಲ್ಲಾ ಜೊತೆ ಕಾರ್ಯದರ್ಶಿ ರಾಜೇಂದ್ರನ್, ವಲಯ ಕೋಶಾಧಿಕಾರಿ ವಾಮನ್ ಕುಮಾರ್, ಘಟಕ ಉಪಾಧ್ಯಕ್ಷ ಶಬರಿ, ಜೊತೆ ಕಾರ್ಯದರ್ಶಿ ಸುನಿಲ್, ನಿರ್ಮ ಲಾಕ್ಷನ್ ಶುಭಕೋರಿದರು. ಘಟಕ ಕಾರ್ಯದರ್ಶಿ ಸುಜಿತ್ ಸ್ವಾಗತಿಸಿ, ಮನೀಶ್ ವಂದಿಸಿದರು.

RELATED NEWS

You cannot copy contents of this page