ಆಸ್ತಿ ತೆರಿಗೆ ಪಾವತಿಸದವರಿಂದ ಅಮಿತ ಬಡ್ಡಿ ಶುಲ್ಕ ವಸೂಲಿ ಕ್ರಮ ಹಿಂತೆಗೆತ

ಕಾಸರಗೋಡು:  ಮನೆ ಇತ್ಯಾದಿ  ಕಟ್ಟಡಗಳ (ಆಸ್ತಿ) ತೆರಿಗೆ ಇತ್ಯಾದಿಗಳನ್ನು ಸಕಾಲದಲ್ಲಿ ಪಾವತಿಸದ ಹೆಸರಲ್ಲಿ ಅದಕ್ಕೆ ಸಾಧಾರಣವಾಗಿರುವ ಅಸಲಿ ಬಡ್ಡಿ ವಸೂಲಿಯ ಹೊರತಾಗಿ ಅಮಿತ ಬಡ್ಡಿದರ ವಸೂಲಿ ಮಾಡುವ ಕ್ರಮವನ್ನು ಹೊರತುಪಡಿಸಿ ರಾಜ್ಯ ಸ್ಥಳೀಯಾಡಳಿತೆ ಇಲಾಖೆ ಆದೇಶ ಜ್ಯಾರಿಗೊಳಿಸಿದೆ.

ಆಸ್ತಿ ತೆರಿಗೆ ಪಾವತಿಸುವಲ್ಲಿ ವಿಳಂಬ ಉಂಟುಮಾಡಿದ್ದಲ್ಲಿ ಅದಕ್ಕೆ ಸಂಬಂಧಪಟ್ಟ ಗ್ರಾಮ ಪಂಚಾಯ ತ್‌ಗಳ ಅಥವಾ ನಗರಸಭೆಗಳು ಸಾಧಾರಣ ಬಡ್ಡಿ ಶುಲ್ಕದ ಹೊರತಾಗಿ ಅಮಿತ ರೀತಿಯ ಬಡ್ಡಿ ಶುಲ್ಕ ವಸೂಲಿ ಮಾಡುತ್ತಿದೆ. ಹೀಗೆ ಆಸ್ತಿ ತೆರಿಗೆ ಪಾವತಿಸದವರಿಂದ ಇನ್ನು ಸಾಧಾರಣ ರೀತಿಯಲ್ಲಿ ಬಡ್ಡಿ ಶುಲ್ಕವನ್ನು ಮಾತ್ರವೇ ವಸೂಲಿ ಮಾಡಿದರೆ ಸಾಕು ಅದರ ಹೊರತಾಗಿರುವ ಅಮಿತ ಬಡ್ಡಿ ಶುಲ್ಕ ವಸೂಲಿ ಮಾಡದಂತೆ ಸ್ಥಳೀಯಾಡಳಿತ ಖಾತೆ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿ ಸಲಾಗಿದೆ. ಇದರಿಂದಾಗಿ ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೇ ಇದ್ದ ಹೆಸರಲ್ಲಿ ಅಮಿತ ಬಡ್ಡಿ ಶುಲ್ಕ ವಸೂಲಿ ಇಲ್ಲದಂತಾ ಗಿದೆ.  ಸಾಧಾರಣ ಬಡ್ಡಿ ಶುಲ್ಕವನ್ನು ಮಾತ್ರವೇ ಇನ್ನು ವಸೂಲಿ ಮಾಡಲಾಗುವುದು.

Leave a Reply

Your email address will not be published. Required fields are marked *

You cannot copy content of this page