ಕೊಚ್ಚಿನ್ ಕನ್ನಡ ಸಂಸ್ಕೃತಿ ಉತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕನ್ನಡ ಸಂಘ ಕೊಚ್ಚಿನ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕೊಚ್ಚಿನ್ ಭಾರತೀಯ ವಿದ್ಯಾ ಭವನ ಸಭಾಂಗಣದಲ್ಲಿ ಮೇ 26ರಂದು ನಡೆಯುವ ಕೊಚ್ಚಿನ್ ಕನ್ನಡ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಕೊಚ್ಚಿನ್ ಮಹಾನಗರ ಪಾಲಿಕೆ ಮಹಾಪೌರ ನ್ಯಾಯವಾದಿ ಎಂ ಅನಿಲ್ ಕುಮಾರ್ ಬಿಡುಗಡೆಗೊಳಿಸಿದರು.
ಕನ್ನಡ ಸಂಘ ಕೊಚ್ಚಿನ್ ಅಧ್ಯಕ್ಷ ಡಿ ಶ್ರೀನಿವಾಸ ರಾವ್, ಗಡಿ ಪ್ರಾಧಿ ಕಾರದ ಸದಸ್ಯ ಎ ಆರ್ ಸುಬ್ಬಯ ಕಟ್ಟೆ, ಸಂಘದ ಮಾಜಿ ಅಧ್ಯಕ್ಷ ಶಿವನಾಥ ಕೌಡಿ, ವಿಜಯಕುಮಾರ ತಂತ್ರಿ, ಉಪಾಧ್ಯಕ್ಷ ಡಾ. ಮಲ್ಲಿ ಕಾರ್ಜುನ ಎಸ್ ನಾಸಿ. ಕಾರ್ಯದರ್ಶಿ ಹರೀಶ್, ಜೊತೆ ಕಾರ್ಯದರ್ಶಿಗಳಾದ ಪರಿಣಿತ ರವಿ, ಎಂ. ತ್ಯಾಗರಾಜ್ ಉಪಸ್ಥಿತರಿದ್ದರು.

RELATED NEWS

You cannot copy contents of this page