ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅನಾಹುತ: ಕನಿಷ್ಠ 7 ಮಂದಿ ಸಾವು; ಹಲವರಿಗೆ ಗಂಭೀರ
ಚೆನ್ನೈ: ತಮಿಳುನಾಡಿನ ಡಿಂಡಿಗಲ್ ತಿರುಚ್ಚಿ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ಭೀಕರ ಅಗ್ನಿ ಅನಾಹುತವುಂಟಾಗಿ ಕನಿಷ್ಠ ೭ ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರ ಸುಟ್ಟು ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾ ಮಕದಳ ಬೆಂಕಿ ನಂದಿಸುವುದರ ಜೊತೆಗೆ ಆಸ್ಪತ್ರೆಯಲ್ಲಿ ಸಿಲುಕಿದ ವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.
ಈ ಬೆಂಕಿ ಅನಾಹುತದಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಇದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಮೃತರಲ್ಲಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಆಸ್ಪತ್ರೆಯ ನೆಲ ಮಹಡಿಯಲ್ಲಿರುವ ರಿಸೆಪ್ಶನ್ ಕೊಠಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ನಂತರ ಕ್ಷಣಮಾ ತ್ರದಲ್ಲಿ ಇಡೀ ಆಸ್ಪತ್ರೆಗೆ ವ್ಯಾಪಿಸಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದೆಂದು ಶಂಕಿಸಲಾಗುತ್ತಿದೆ.
ಸಾವನ್ನಪ್ಪಿದ ಐದು ಮಂದಿಯನ್ನು ಸುರುಳಿ (50), ಸುಬ್ಬುಲಕ್ಷ್ಮಿ (45), ಮರಿಯಮ್ಮಾಳ್ (50), ಮುರುಗನ್ (26), ರಾಜಶೇಖರನ್ (35) ಎಂದು ಗುರುತಿಸಲಾಗಿದೆ.
ಇವರ ಹೊರತಾಗಿ ಒಂದು ಹೆಣ್ಣು ಮಗು ಸೇರಿ ಇನ್ನೋರ್ವ ರು ಸಾವನ್ಪಪ್ಪಿ ದವರಲ್ಲಿ ಒಳಗೊಂಡಿ ದ್ದಾರೆ. ಈ ದುರಂತದಲ್ಲಿ ೨೦ ಮಂದಿ ಗಂಭೀರ ಸುಟ್ಟು ಗಾಯಗೊಂಡಿದ್ದು, ಅವರನ್ನು ಐಸಿಯು ವೆಂಟಿಲೇಟರ್ನಲ್ಲಿ ದಾಖಲಿಸಲಾಗಿದೆ.