ಗಾಂಜಾ ಪತ್ತೆ: ಯುವಕ ಸೆರೆ

ಕಾಸರಗೋಡು: ಚೆರ್ಕಳಕ್ಕೆ ಸಮೀಪದ ತೆಕ್ಕಿಲ್‌ನಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ೨೭ ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಚೆಂಗಳ ಕುಂಡಡ್ಕ ಅಕ್ಕರ ನಿವಾಸಿ ಉಣ್ಣಿಕೃಷ್ಣನ್ ಪಿ. (25) ಎಂಬಾತನನ್ನು ಬಂಧಿಸಲಾಗಿದೆ. ಆತ ಸಂಚರಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.

ಕಾಸರಗೋಡು ಅಬಕಾರಿ ರೇಂಜ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ.ಯುರ ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್‌ಗಳಾದ ಉಣ್ಣಿಕೃಷ್ಣನ್ ಕೆ, ಪ್ರಶಾಂತ್ ಪಿ. (ಗ್ರೇಡ್), ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಬಾಬು ವಿ, ರಾಜೇಶ್ ಪಿ, ಧನ್ಯ ಟಿ.ವಿ, ಮತ್ತು  ಚಾಲಕ ಸುಮೇದ್ ಕುಮಾರ್ ಎಂಬಿವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

RELATED NEWS

You cannot copy contents of this page