ಇಂದು ವಿಶ್ವ ಮಧುಮೇಹ ದಿನ: ಕೇರಳದಲ್ಲಿ ಪ್ರತೀ 50 ಲಕ್ಷ ಮಂದಿಯಲ್ಲಿ 4.31 ಲಕ್ಷ ಮಂದಿಗೆ ಸಕ್ಕರೆ ಕಾಯಿಲೆ
ಕಾಸರಗೋಡು: ಇಂದು ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತಿದೆ. ಇದೇ ವೇಳೆ ಕೇರಳದಲ್ಲಿ ಪ್ರತೀ 50 ಲಕ್ಷದ ಮಂದಿಯಲ್ಲಿ 4,31,448 ಮಂದಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ರಾಜ್ಯ ಆರೋಗ್ಯ ಇಲಾಖೆಯ ಅಧಿಕೃತ ಲೆಕ್ಕಾಚಾರ ವಾಗಿದೆ. 30ಕ್ಕಿಂತ ಮೇಲ್ಪಟ್ಟವರನ್ನು ವೈದ್ಯಕೀಯ ತಪಾಸಣೆಗೊಳಪಡಿ ಸಿದಾಗ ಹಲವರಲ್ಲಿ ಮಧುಮೇಹ ಲಕ್ಷಣಗಳು ಕಂಡು ಬಂದಿದೆ.
ಸಕಾಲದಲ್ಲಿ ರೋಗ ನಿರ್ಣಯ ನಡೆಸದೆ ಇರುವ ಹಲವರು
ಮುಂದೆ ತೀವ್ರ ಸಕ್ಕರೆ ಕಾಯಿಲೆ ರೋಗಿಗಳಾಗಿ ಬದಲಾಗಿದ್ದಾರೆ.
ಜೀವನ ಶೈಲಿ ಹಾಗೂ ಕೊಬ್ಬಿನ ಅಂಶಗಳು ಒಳಗೊಂಡ ಆಹಾರ ಸೇವಿಸುವುದೇ ಮಧುಮೇಹ ಕಾಯಿಲೆ ತಗಲಲು ಪ್ರಧಾನ ಕಾರಣವಾಗುತ್ತಿದೆ ಎಂದು ತಜ್ಞವೈದ್ಯರು ಹೇಳುತ್ತಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ. ೧೮ರಷ್ಟು ಮಂದಿ ಡಯಾಬಿಟಿಕ್ಸ್ ಕಂಡೀಷನ್ ರೋಗಿ ಗಳಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಹಿಂದೆ ಸೂಚಿಸಿತ್ತು. ಅದು ಈಗ ಬಹುತೇಕ ಸತ್ಯವಾಗ ತೊಡಗಿದೆ. ಈಗ 30ರ ಹರೆಯದ ವರಲ್ಲೂ ಮಧುಮೇಹ ರೋಗ ಲಕ್ಷಣ ಕಂಡುಬರುತ್ತಿದೆ.