ಉದ್ಯೋಗ ಭರವಸೆಯೊಡ್ಡಿ ಹಲವರಿಗೆ ವಂಚಿಸಿದ ಅಧ್ಯಾಪಿಕೆಯನ್ನು ಸೇವೆಯಿಂದ ವಜಾಗೊಳಿಸಲು ಯೂತ್‌ಲೀಗ್ ಒತ್ತಾಯ
ಕಾಸರಗೋಡು: ಸರಕಾರಿ ಕಚೇರಿಗಳಲ್ಲಿ ಉದ್ಯೋಗ ದೊರಕಿಸುವುದಾಗಿ ಭರವಸೆಯೊಡ್ಡಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಮಾಜಿ ಡಿವೈಎಫ್‌ಐ ನೇತಾರೆ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈಯನ್ನು ಅಧ್ಯಾಪಿಕೆ ಸೇವೆಯಿಂದ ವಜಾಗೊಳಿಸಬೇಕೆಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರ ಮುಸ್ಲಿಂ ಯೂತ್ ಲೀಗ್ ಒತ್ತಾಯಿಸಿದೆ. ಈ ಬೇಡಿಕೆ ಮುಂದಿರಿಸಿ ಡಿಡಿಇ ಕಚೇರಿಗೆ ಯೂತ್ ಲೀಗ್ ಮುತ್ತಿಗೆ ಚಳವಳಿ ನಡೆಸಿದೆ. ಅಸೀಸ್ ಕಳತ್ತೂರು, ಬಿ.ಎಂ. ಮುಸ್ತಫ, ಸಿದ್ದಿಕ್ ದಂಡೆಗೋಳಿ, ಮಜೀದ್ ಪಚ್ಚಂಬಳ, ಪಿ.ಎಚ್. ಅಸ್‌ಹರಿ, ಜಂಶೀರ್ ಮೊಗ್ರಾಲ್, ರಹೀಂ ನೀರೋಳಿ, ಎಂ.ಜಿ. ನಾಸರ್, ಸಿದ್ದಿಕ್ ಒಳಮೊಗರು ಮೊದಲಾ ದವರು ನೇತೃತ್ವ ನೀಡಿದರು.
ಹಲವರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಬಗ್ಗೆ ದೂರು ಲಭಿಸಿದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಈ ರೀತಿ ಭಾರೀ ವಂಚನೆ ನಡೆಸಲು ಬೇರೆ ಯಾರಾದರೂ ಸಹಾಯ ಒದಗಿಸಿ ದ್ದರೆ ಅವರನ್ನೂ ಪತ್ತೆಹಚ್ಚಬೇಕೆಂದು ಯೂತ್ ಲೀಗ್ ಆಗ್ರಹಿಸಿದೆ. ಅಧಿಕಾ ರದ ಮರೆಯಲ್ಲಿ ಏನು ಬೇಕಾದರೂ ಮಾಡಬಹುದೆಂಬ ರೀತಿಯಲ್ಲಿ ಸಿಪಿಎಂ ನೇತಾರರು, ಕಾರ್ಯಕ ರ್ತರು ವರ್ತಿಸುತ್ತಿದ್ದಾರೆಂದೂ ಯೂತ್ ಲೀಗ್ ಆರೋಪಿಸಿದೆ.