ಉಪ್ಪಳದಲ್ಲಿ ಸರ್ವೀಸ್ ರಸ್ತೆ ಜಲಾವೃತ
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಆರು ಮಾರ್ಗವಾಗಿ ನಿರ್ಮಾಣ ಕಾರ್ಯಗಳು ಪ್ರಗತಿಯಲ್ಲಿರುವಂತೆ ಮಳೆ ಸುರಿಯುವ ವೇಳೆ ಸಂಚಾರ ಸಂಕಷ್ಟ ಸಹಿತ ವಿವಿಧ ಸಮಸ್ಯೆಗಳು ತಲೆ ಎತ್ತುತ್ತಿವೆ. ಉಪ್ಪಳದ ಸರ್ವೀಸ್ ರಸ್ತೆಯಲ್ಲಿ ನೀರು ಕಟ್ಟಿ ನಿಂತು ವಾಹನ ಸಂಚಾರಕ್ಕೆ ಸಮಸ್ಯೆ ಒಂದೆಡೆಯಾದರೆ ಇನ್ನೊಂದೆಡೆ ಈ ನೀರೆಲ್ಲ ಅಂಗಡಿಗಳಿಗೆ ನುಗ್ಗಿ ಸಂಕಷ್ಟ ಉಂಟಾಗಿದೆ. ಉಪ್ಪಳ ಪೇಟೆಯಲ್ಲೂ ನೀರು ಕಟ್ಟಿ ನಿಂತು ತೊಂದರೆ ಉಂಟಾಗಿದೆ. ನಿನ್ನೆ ಸಂಜೆ ಸುರಿದ ಮಳೆಗೆ ಈ ಆವಾಂತರಗಳು ಉಂಟಾಗಿದ್ದರೆ ಮುಂದೆ ಮಳೆಗಾಲದಲ್ಲಿ ಏನೆಲ್ಲ ಸಮಸ್ಯೆಗಳು ತಲೆದೋರಲಿದೆ ಎಂಬ ಚಿಂತೆ ಸ್ಥಳೀಯರಲ್ಲಿದೆ.
ಇದೇ ವೇಳೆ ಉಪ್ಪಳ ಗೇಟ್‌ನ ಅಂಡರ್ ಪಾಸ್ ಬಳಿಯೂ ನೀರು ಕಟ್ಟಿ ನಿಂತಿದೆ. ಕೆಲವು ಕಡೆ ಸರ್ವೀಸ್ ರಸ್ತೆಯ ಚರಂಡಿ ನಿರ್ಮಾಣ ಹಂತದಲ್ಲಿರುವ ಕಾರಣ ನೀರು ಸರಿಯಾಗಿ ಹರಿದು ಹೋಗಲಾಗದೆ ಸಮಸ್ಯೆಯಾಗಿದೆ. ಇದೇ ವೇಳೆ ಎತ್ತರದಲ್ಲಿ ಹೆದ್ದಾರಿ ಸಾಗುವ
ಕಡೆಗಳಲ್ಲಿ ಹೆದ್ದಾರಿಯ ನೀರು ಸರ್ವೀಸ್ ರಸ್ತೆಗೆ ಬೀಳುತ್ತಿದ್ದು, ಇದ ಸರ್ವೀಸ್ ರಸ್ತೆ
ಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗುತ್ತಿದೆ. ಹೆದ್ದಾರಿಯ ಎಲ್ಲಾ ಕಾಮಗಾರಿ ಪೂರ್ತಿಯಾ ಗುವವರೆಗೆ ಸಮಸ್ಯೆಗಳು ಹಲವಾರು ತಲೆದೋರಲಿದೆ ಎನ್ನಲಾಗಿದೆ.