ಉಪ್ಪಳ ಗೇಟ್‌ನಲ್ಲಿ ಲಾರಿ ಪಲ್ಟಿ: ತಪ್ಪಿದ ದುರಂತ

ಉಪ್ಪಳ: ಸರಕು ಲಾರಿಯೊಂದು ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಘಟನೆ ಇಂದು ಬೆಳಿಗ್ಗೆ ಉಪ್ಪಳ ಗೇಟ್‌ನಲ್ಲಿ ಸಂಭವಿಸಿದೆ. ಕಾಸರಗೋಡು ಭಾಗದಿಂದ ಮಂಗಳೂರಿನತ್ತ ತೆರಳುತ್ತಿದ್ದ ತಮಿಳುನಾಡು ನೋಂದಾಯಿತ ಲಾರಿ ಅಪಘಾತಕ್ಕೀಡಾಗಿದೆ. ಲಾರಿಯಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ. ಲಾರಿ ಮಗುಚಿ ಬಿದ್ದ ವೇಳೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು ಒಂದು ಕಾರಿಗೂ ಹಾನಿಯುಂಟಾಗಿದೆ.

You cannot copy contents of this page