ಉಬ್ರಂಗಳ ಬಡಗು ಶಬರಿಮಲೆಯಲ್ಲಿ ಶ್ರೀದೇವರ ದರ್ಶನಬಲಿ
ಬದಿಯಡ್ಕ: ಉಬ್ರಂಗಳ ಬಡಗುಶಬರಿಮಲೆ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ವಾರ್ಷಿಕ ಪಾಟು ಉತ್ಸವ, ಶ್ರೀಭೂತ ಬಲಿ ಉತ್ಸವ ಹಾಗೂ ಧೂಮಾವತಿ ದೈವದ ಕೋಲ ನಿನ್ನೆ ಮುಕಾÀ್ತ ಯ ಗೊಂಡಿತು. ಶನಿವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿತ್ತು. ಪಾಟು ಉತ್ಸವದ ನಂತರ ಮಂಗಳವಾರ ರಾತ್ರಿ ಶ್ರೀದೇವರ ಬಲಿ ಉತ್ಸವ, ಬೆಡಿಸೇವೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾಟ್ಯಗುರು ಮಂಜೇಶ್ವರ ಬಾಲಕೃಷ್ಣ ಮಾಸ್ತರ್ ಇವರ ಶಿಷ್ಯರಿಂದ ನೃತ್ಯ ವೈವಿಧ್ಯ ನಡೆಯಿತು. ನಿನ್ನೆ ಬೆಳಗ್ಗೆ ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಮಂತ್ರಾಕ್ಷತೆ, ರಾತ್ರಿ ಶ್ರೀ ಧೂಮಾವತೀ ದೈವದ ಕೋಲ, ವಾದ್ಯಘೋಷಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ದೈವದ ಭೇಟಿ, ಗುಳಿಗನ ಕೋಲ ನಡೆಯಿತು.