ಉಳುವಾನ ರಸ್ತೆಯಲ್ಲಿ ಹೊಂಡ: ಸಂಚಾರಕ್ಕೆ ಸಮಸ್ಯೆ
ಪೈವಳಿಕೆ: ರಸ್ತೆ ಬದಿಯಲ್ಲಿ ಬೃಹತ್ ಹೊಂಡಗಳು ಸೃಷ್ಟಿಯಾಗಿ ಬಸ್ ಸಹಿತ ಇತರ ವಾಹನಗಳಿಗೆ ಸೈಡು ನೀಡುವ ವೇಳೆ ಅಪಘಾತಕ್ಕೆ ಕಾರಣವಾಗುತ್ತಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಲೋ ಕೋಪಯೋಗಿ ಇಲಾಖೆಯ ಬಾಯರು ರಸ್ತೆಯ ಉಳುವಾನ ಹಾಗೂ ಬಾಯಾರು ಪದವು ನಿಂದ ಮೇಲಿನ ಬಾಯಾರು ತನಕ ರಸ್ತೆ ಬದಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದೆ.
ಬಸ್ ಸಹಿತ ಇತರ ವಾಹನ ಗಳಿಗೆ ಎದುರಿನಿಂದ ಬರುವ ವಾಹನಗಳಿಗೆ ಸೈಡು ನೀಡಲು ರಸ್ತೆ ಬದಿಯ ಹೊಂಡಕ್ಕೆ ಇಳಿಸ ಬೇಕಾಗುತ್ತಿದ್ದು, ಇದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಇಲ್ಲಿ ಅಪಘಾತಗಳು ನಡೆದಿರುವುದಾಗಿ ಹೇಳಲಾಗುತ್ತಿದೆ. ಕನಿಯಾಲ, ಪೆರ್ಮುದೆ, ಸಜಂಕಿಲ ಸಹಿತ ವಿವಿಧ ಪ್ರದೇಶಗಳಿಂದ ದಿನನಿತ್ಯ ಬಾಯಾರು ಆರೋಗ್ಯ ಕೇಂದ್ರ, ವಿಲೇಜ್, ಕೃಷಿಭವನ, ಬ್ಯಾಂಕ್, ರೇಶನ್ ಅಂಗಡಿ ಸಹಿತ ವಿವಿಧ ಸರಕಾರಿ ಕಚೇರಿಗಳು ಹಾಗೂ ಇತರ ಕೆಲಸ ಕಾರ್ಯಗಳಿಗೆ ನೂರಾರು ಮಂದಿ ವಾಹಗಳ ಮೂಲಕ ತೆರಳುತ್ತಿದ್ದಾರೆ. ಸಂಬAಧಪಟ್ಟ ಪಂಚಾಯತ್ ಅಧಿಕಾರಿಗಳು, ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.