ಉಸಿರಾಟ ತೊಂದರೆ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕುಂಬಳೆ: ಉಸಿರಾಟ ತೊಂದರೆಯಿಂದ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರ. ಕುಂಬಳೆ ಬದ್ರಿಯ ನಗರದ ಮೊಹಮ್ಮದ್ -ಜಮೀಲ ದಂಪತಿಯ ಪುತ್ರ ಅಶ್ರಫ್ (43) ಮೃತಪಟ್ಟ ದುರ್ದೈವಿ. ಅಸೌಖ್ಯ ಬಾಧಿಸಿದ್ದ ಇವರನ್ನು ಒಂದು  ವಾರ ಹಿಂದೆ ಕಾಸರಗೋ ಡಿನ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಮೊನ್ನೆ ಅವರನ್ನು ಮನೆಗೆ ಕರೆದುಕೊಂಡು ಹೋಗಲಾಗಿತ್ತು. ನಿನ್ನೆ ಸಂಜೆ ಮತ್ತೆ ಉಸಿರಾಟ ಸಮಸ್ಯೆ ಎದುರಾಗಿದ್ದು, ಬಳಿಕ ಮೃತಪಟ್ಟರು.

ಮೃತರು ಪತ್ನಿ ರಿಯಾನ, ಮಕ್ಕಳಾದ ಫಾತಿಮ, ಫರ್ಹಾನ, ಫಾರಿಸ್, ಸಹೋದರ-ಸಹೋದರಿ ಯರಾದ ಖಾಸಿಂ, ನೌಶೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page