ಎಂಡೋಸಲ್ಫಾನ್ ಸಂತ್ರಸ್ತ ನಿಧನ

ಪೆರ್ಲ: ಎಂಡೋಸಲ್ಫಾನ್ ಸಂತ್ರಸ್ತ ಯುವಕ ಅಸೌಖ್ಯ ಉಲ್ಭಣಗೊಂಡು ಮೃತಪಟ್ಟರು. ಕಾಟುಕುಕ್ಕೆ ಕರಿಂಬಿತ್ತಿಲು ನಿವಾಸಿ   ದೇವಣ್ಣ ನಾಯ್ಕರ ಪುತ್ರ ಮಧುಸೂದನ (37) ಮೃತಪಟ್ಟ ವ್ಯಕ್ತಿ. ಇವರು ಎಣ್ಮಕಜೆ ಪಂಚಾ ಯತ್‌ನ ಎಂಡೋಸಲ್ಫಾನ್ ಸಂತ್ರಸ್ತರ  ಯಾದಿಯಲ್ಲಿ ಒಳಗೊಂ ಡಿ ದ್ದರು. ಇತ್ತೀಚೆಗೆ ಅಸೌಖ್ಯ ಉಲ್ಬಣ ಗೊಂಡ ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ನಿಧನ ಸಂಭವಿಸಿದೆ.

ಮೃತರು ತಾಯಿ ದೇವಕಿ, ಸಹೋದರರಾದ ಬಾಲಕೃಷ್ಣ, ಶಿವಕುಮಾರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page