ಎಂ.ಡಿ.ಎಂ.ಎ: ಪೊಲೀಸರಿಗೆ ಮಾಹಿತಿ ನೀಡಿದನೆಂದು ಆರೋಪಿಸಿ ಯುವಕನಿಗೆ ಹಲ್ಲೆ
ಕುಂಬಳೆ: ಎಂಡಿಎಂಎ ಸಾಗಾಟ ಪ್ರಕರಣದ ವಾರಂಟ್ ಆರೋಪಿಯನ್ನು ಕರ್ನಾಟಕ ಪೊಲೀಸರು ಬಂಧಿಸಿದ ದ್ವೇಷದಿಂದ ಮಾರಕಾಯುಧಗಳೊಂದಿಗೆ ತಲುಪಿದ ತಂಡ ಯುವಕನಿಗೆ ಹಲ್ಲೆಗೈದು ಗಾಯಗೊಳಿಸಿದೆ. ತಲೆ ಸಹಿತ ವಿವಿಧೆಡೆ ಗಾಯಗೊಂಡ ಉಪ್ಪಳಗೇಟ್ ಶಾಫಿ ನಗರದ ಬಶೀರ್ ಅಬ್ಬಾಸ್ (೩೫)ರನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ನಿನ್ನೆ ಸಂಜೆ ಮನೆಯ ಮುಂದೆ ನಿಂತಿದ್ದ ವೇಳೆ ಘಟನೆ ನಡೆದಿದೆ. ಕಾರ್ಯಕ್ರಮವೊಂದಕ್ಕೆ ತೆರಳಲೆಂದು ಬಶೀರ್ ಅಬ್ಬಾಸ್ ಹೊರಟು ನಿಂತಿದ್ದರು. ಈ ಮಧ್ಯೆ ಕಾರು ಹಾಗೂ ಬೈಕ್ಗಳಲ್ಲಿ ತಲುಪಿದ ೨೫ರಷ್ಟು ಮಂದಿಯ ತಂಡ ಮಾರಕಾಯು ಧಗಳಿಂದ ಹಲ್ಲೆಗೈದಿರುವುದಾಗಿ ಬಶೀರ್ ಅಬ್ಬಾಸ್ ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಾದಕ ವಸ್ತು ಪ್ರಕರಣದ ವಾರಂಟ್ ಆರೋಪಿಯಾದ ಓರ್ವನನ್ನು ಕರ್ನಾಟಕ ಪೊಲೀಸರು ಬಂಧಿಸಿ ಕೊಂಡೊಯ್ದಿದ್ದರು. ಬಶೀರ್ ಅಬ್ಬಾಸ್ ನೀಡಿದ ಮಾಹಿತಿಯಂತೆ ಪೊಲೀಸರು ಬಂಧಿಸಿದ್ದಾರೆಂದು ಆರೋಪಿಸಿ ಹಲ್ಲೆಗೈದಿರುವುದಾಗಿ ಹೇಳಲಾಗುತ್ತಿದೆ. ಇದೇ ವೇಳೆ ಇತ್ತೀಚೆಗೆ ಇನ್ನೋರ್ವನನ್ನೂ ಮಾದಕವಸ್ತು ಸಹಿತ ಸೆರೆಹಿಡಿ ಯಲಾಗಿತ್ತು. ಇದರ ಸಾಕ್ಷಿಯಾಗಿ ಸಹಿ ಹಾಕಿರುವುದು ಬಶೀರ್ ಅಬ್ಬಾಸ್ ಆಗಿದ್ದಾರೆಂದು ಹೇಳಲಾ ಗುತ್ತಿದೆ. ಇದು ಕೂಡಾ ಹಲ್ಲೆಗೆ ಕಾರಣವೆಂದು ಸಂಶಯಿಸಲಾಗುತ್ತಿದೆ.