ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎಲ್ಡಿಎಫ್ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ನಿನ್ನೆ ಹಲವು ಸಂಘ-ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ನೌಕರರಿಂದ ಮತ ಯಾಚಿಸಿದರು. ಬೆಳಿಗ್ಗೆ ಚೆರ್ಕಳ ದಿನೇಶ್ ಬೀಡಿ ಕಂಪೆನಿಗೆ ತಲುಪಿದ ಅವರು ಅಲ್ಲಿನ ನೌಕರರನ್ನು ಭೇಟಿಯಾದರು. ಅನಂತರ ಚೆಂಗಳ ಇ.ಕೆ. ನಾಯನಾರ್ ಸಹಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ನೌಕರರು ಹಾಗೂ ಅಲ್ಲಿ ಚಿಕಿತ್ಸೆಯಲ್ಲಿರುವವ ರನ್ನು ಭೇಟಿಮಾಡಿ ಮತ ಯಾಚಿಸಿದರು. ನಾಯಮ್ಮಾರಮೂಲೆಯ ವಾಹನ ಶೋರೂಂಗಳು, ವಿದ್ಯಾನಗರ ಗೃಹೋಪಕರಣ ಸಂಸ್ಥೆ, ಕಾಸರಗೋಡು ನಗರದ ಜವುಳಿ ಅಂಗಡಿಗಳಿಗೆ ಭೇಟಿ ನೀಡಿ ಮತ ಯಾಚಿಸಿ ದರು. ಅನಂತರ ಕಾಞಂಗಾಡ್ ನೆಹರೂ ಆರ್ಟ್ಸ್ ಆಂಡ್ ಸಯನ್ಸ್ ಕಾಲೇಜು, ಪೆರಿಯಾ ಸರಕಾರಿ ಪಾಲಿಟೆಕ್ನಿಕ್, ಮುಳ್ಳೇ ರಿಯ ಸಹಕಾರಿ ಆಸ್ಪತ್ರೆ, ಆದೂರು, ಬೆಳ್ಳೂರು, ಕುಂಬ್ಡಾಜೆ, ಅಗಲ್ಪಾಡಿ ಶ್ರೀ ದುರ್ಗಾಪರ ಮೇಶ್ವರಿ ಕ್ಷೇತ್ರ ಎಂಬೆಡೆಗಳಿಗೆ ಎಂ.ವಿ. ಬಾಲಕೃಷ್ಣನ್ ನೇತಾರರೊಂದಿಗೆ ಭೇಟಿ ನೀಡಿದರು.






