ಎನ್‌ಡಿಎ ಅಭ್ಯರ್ಥಿಯ ಜಯಗೊಳಿಸಲು ಬಿಡಿಜೆಎಸ್ ರಂಗಕ್ಕೆ

ಕಾಸರಗೋಡು: ಬಿಡಿಜೆಎಸ್ ಜಿಲ್ಲಾ ಕಾರ್ಯನಿರತರ ಸಭೆ ಇತ್ತೀಚೆಗೆ ಜರಗಿತು. ಜಿಲ್ಲಾ ಅಧ್ಯಕ್ಷ ಗಣೇಶ್ ಪಾರೆಕಟ್ಟೆಯವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯನ್ನು ರಾಜ್ಯ ಸಮಿತಿ ಉಪಾಧ್ಯಕ್ಷ ಪೈಲಿ ವಾದಿಯಾಟ್ ಉದ್ಘಾಟಿಸಿದರು. ಲೋಕಸಭಾ ಚುನಾವಣೆಯಲ್ಲಿ  ಸ್ಪರ್ಧಿಸುವ ಎನ್‌ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಯವರನ್ನು ವಿಜಯಗೊಳಿಸಲು ರಂಗಕ್ಕಿಳಿಯಬೇಕೆಂದು ಸಭೆಯಲ್ಲಿ ಕರೆ ನೀಡಲಾಯಿತು. ಇದರಂಗವಾಗಿ ಈ ತಿಂಗಳ ೨೬ರಂದು ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಸಲು ಸಭೆ ತೀರ್ಮಾನಿಸಿದೆ. ಬಿಡಿಜೆಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ. ನಾರಾಯಣನ್,  ಕುಂಞಿಕೃಷ್ಣನ್, ಜೋಶಿ, ಜಯಂತನ್ ಪಚ್ಚಂಬಳ, ಪ್ರಭಾಕರನ್, ಸುರೇಂದ್ರನ್, ರಾಜೇಶ್, ರಾಜು ಕುಬಣೂರು ಮಾ ತನಾಡಿದರು. ಕೆ.ಕೆ. ನಾರಾಯಣನ್ ಸ್ವಾಗತಿಸಿ, ಜೋಶಿ ವಂದಿಸಿದರು.

RELATED NEWS

You cannot copy contents of this page