ಎರಡೆಡೆ ಅಬಕಾರಿ ಕಾರ್ಯಾಚರಣೆ: ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ
ಕಾಸರಗೋಡು: ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ಮದ್ಯ ಸಹಿತ ಓರ್ವನನ್ನು ಸೆರೆಹಿಡಿದಿದ್ದಾರೆ. ಬಾಯಾರು ಗ್ರಾಮದ ಕನಿಯಾಲ- ಬೆರಿಪದವು ರಸ್ತೆಯ ಚಿಮ್ಮಿನಿಯಡ್ಕದಲ್ಲಿ ಕುಂಬಳೆ ಎಕ್ಸೈಸ್ ರೇಂಜ್ನ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ 5.4 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮಾಣಿಲ ಮುರುವದ ರೂಪಾಯಿಮೂಲೆಯ ರಮೇಶ್ ಆರ್ (42) ಬಂಧಿಸಿ ಕೇಸು ದಾಖಲಿಸಲಾ ಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒಗಳಾದ ರಂಜಿತ್ ಟಿ.ಕೆ, ಮನೋಜ್ ಕುಮಾರ್ ಕೆ.ಪಿ. ಮತ್ತು ಅಖಿಲೇಶ್ ಎಂ.ಎಂ ಎಂಬಿವರು ಒಳಗೊಂಡಿದ್ದರು.