ಎಸ್. ನಾರಾಯಣ ಭಟ್ರಿಗೆ ಸಂತಾಪ ಸಭೆ
ಪೈವಳಿಕೆ: ಸಿಪಿಎಂ ನೇತಾರ ಹಾಗೂ ಗ್ರಂಥಾಲಯ ಸಂಘಟನೆಯ ನೇತಾರ ಎಸ್ ನಾರಾಯಣ ಭಟ್ ರವರ ಸಂತಾಪ ಸೂಚಕ ಸಭೆ ಬಾಯಾರು ಪದವುನಲ್ಲಿ ನಡೆಯಿತು. ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ ಅಧ್ಯಕ್ಷತೆ ವಹಿಸಿದ್ದರು. ಮುಸ್ಲಿಂ ಲೀಗ್ ನೇತಾರ ಜೆಡ್.ಎ ಕಯ್ಯÁರ್, ಸಿಪಿಐ ನೇತಾರ ಅಜಿತ್ ಎಂ ಸಿ, ಬಿಜೆಪಿ ನೇತಾರ ವಿಘ್ನೇಶ್ವರ ಭಟ್, ಕಾಂಗ್ರೆಸ್ ನೇತಾರ ರಾಮ್ ಭಟ್, ಕೆ.ಎಸ್.ಟಿ.ಎ ಜಿಲ್ಲಾ ಅಧ್ಯಕ್ಷ ಶ್ಯಾಮ್ ಭಟ್, ರಾಮಕೃಷ್ಣ ಭಟ್, ಮೋನಪ್ಪ ಶೆಟ್ಟಿ, ನಾಸೀರ್ ಕೋರಿಕ್ಕಾರ್, ವೆಂಕಪ್ಪ ಭಟ್, ಪುರುಷೋತ್ತಮ ಬಳ್ಳೂರು ಮಾತನಾಡಿದರು. ವಿನಯ್ ಕುಮಾರ್ ಸ್ವಾಗತಿಸಿದರು.